ಮೈಸೂರು: ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ದಯನೀಯ ಸ್ಥಿತಿಯಲ್ಲಿರುವ ಸಂತ್ರಸ್ತರ ನೆರವಿಗೆ ಬೆಂಗಳೂರಿನ ಪೌರಕಾರ್ಮಿಕರು ಕೈಜೋಡಿಸಿದ್ದಾರೆ. ಒಟ್ಟು 300 ಮಂದಿ ಪೌರಕಾರ್ಮಿಕರು ಹಾಗೂ ನಾಲ್ವರು ಆರೋಗ್ಯಾಧಿಕಾರಿಗಳು 6 ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಬೆಂಗಳೂರಿನಿಂದ ಮಡಿಕೇರಿ ತಲುಪಿದ್ದು, ಸೈನಿಕರು, ಪೊಲೀ ಸರು, ಅಗ್ನಿಶಾಮಕದಳದೊಂದಿಗೆ ಸಂತ್ರ ಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಭಾನುವಾರ 150 ಮಂದಿ ಬೆಂಗಳೂರಿನಿಂದ ಹೊರಟು ರಾತ್ರಿ ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿ ಸೋಮವಾರ ಬೆಳಿಗ್ಗೆ ಮಡಿಕೇರಿ ತಲುಪಿದರೆ, ಉಳಿದ 150 ಮಂದಿಯ ಮತ್ತೊಂದು…