ಕೊಡಗು ನೆರೆಪೀಡಿತ ಸಂತ್ರಸ್ತರ ನೆರವಿಗೆ 100 ಬಯೋ ಟಾಯ್ಲೆಟ್‍ನೊಂದಿಗೆ ಧಾವಿಸಿದ : 300 ಮಂದಿ ಬಿಬಿಎಂಪಿ ಪೌರಕಾರ್ಮಿಕರು
ಮೈಸೂರು

ಕೊಡಗು ನೆರೆಪೀಡಿತ ಸಂತ್ರಸ್ತರ ನೆರವಿಗೆ 100 ಬಯೋ ಟಾಯ್ಲೆಟ್‍ನೊಂದಿಗೆ ಧಾವಿಸಿದ : 300 ಮಂದಿ ಬಿಬಿಎಂಪಿ ಪೌರಕಾರ್ಮಿಕರು

August 21, 2018

ಮೈಸೂರು: ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ದಯನೀಯ ಸ್ಥಿತಿಯಲ್ಲಿರುವ ಸಂತ್ರಸ್ತರ ನೆರವಿಗೆ ಬೆಂಗಳೂರಿನ ಪೌರಕಾರ್ಮಿಕರು ಕೈಜೋಡಿಸಿದ್ದಾರೆ.

ಒಟ್ಟು 300 ಮಂದಿ ಪೌರಕಾರ್ಮಿಕರು ಹಾಗೂ ನಾಲ್ವರು ಆರೋಗ್ಯಾಧಿಕಾರಿಗಳು 6 ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಬೆಂಗಳೂರಿನಿಂದ ಮಡಿಕೇರಿ ತಲುಪಿದ್ದು, ಸೈನಿಕರು, ಪೊಲೀ ಸರು, ಅಗ್ನಿಶಾಮಕದಳದೊಂದಿಗೆ ಸಂತ್ರ ಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಭಾನುವಾರ 150 ಮಂದಿ ಬೆಂಗಳೂರಿನಿಂದ ಹೊರಟು ರಾತ್ರಿ ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿ ಸೋಮವಾರ ಬೆಳಿಗ್ಗೆ ಮಡಿಕೇರಿ ತಲುಪಿದರೆ, ಉಳಿದ 150 ಮಂದಿಯ ಮತ್ತೊಂದು ತಂಡ ಇಂದು (ಸೋಮವಾರ) ಬೆಂಗಳೂರಿನಿಂದ ಹೊರಟು ಮಧ್ಯಾಹ್ನ ಮಡಿಕೇರಿ ತಲುಪಿದೆ ಎಂದು ಬಿಬಿಎಂಪಿ ಅಡಿಷನಲ್ ಕಮಿಷ್ನರ್ ಡಿ.ರಂದೀಪ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಅವರೊಂದಿಗೆ 100 ಬಯೋ ಟಾಯ್ಲೆಟ್ ಗಳನ್ನೂ ಟ್ರಕ್‍ಗಳಲ್ಲಿ ಕೊಡಗು ಜಿಲ್ಲೆಗೆ ಕಳು ಹಿಸಲಾಗಿದ್ದು, ತಾತ್ಕಾಲಿಕ ಶೌಚಾಲಯಗಳ ನ್ನಾಗಿ ಅವುಗಳನ್ನು ಬಳಸಿಕೊಳ್ಳಬಹುದಾಗಿದೆ. ಜಾಕೆಟ್, ಗಮ್‍ಟ್ಯೂಬ್‍ಗಳು, ಹೆಲ್ಮೆಟ್, ಹ್ಯಾಂಡ್ ಗ್ಲೌಸ್, ಸ್ವಚ್ಛತಾ ಸಾಮಾಗ್ರಿಗಳನ್ನೂ ಪೌರಕಾರ್ಮಿಕರೊಂದಿಗೆ ಕಳುಹಿಸಿಕೊಡಲಾಗಿದೆ. ಆರೋಗ್ಯಾಧಿಕಾರಿಗಳು 300 ಮಂದಿ ಪೌರಕಾರ್ಮಿಕರ ಮೇಲ್ವಿಚಾರಣೆ ನಡೆಸಲಿದ್ದು, ಅಲ್ಲಿನ ಜಿಲ್ಲಾಡಳಿತದ ಮಾರ್ಗ ದರ್ಶನದಂತೆ ಸಂತ್ರಸ್ತರ ರಕ್ಷಣೆ ಹಾಗೂ ಸ್ವಚ್ಛತಾ ಕಾರ್ಯವನ್ನು ಮಾಡಿಸುವರು. ಅಲ್ಲದೆ ಸಂತ್ರಸ್ತರ ಪರಿಹಾರ ಹಾಗೂ ಸಾಮಗ್ರಿ ಸಂಗ್ರಹಿಸಲು ಬಿಬಿಎಂಪಿಯಿಂದ ಬೆಂಗಳೂರಿನ ಸಂಪಂಗಿ ರಾಮನಗರದ ದೇವಾಂಗ ಹಾಸ್ಟೆಲ್ ರಸ್ತೆಯಲ್ಲಿರುವ ಡಾ|| ರಾಜ್ ಕುಮಾರ್ ಗ್ಲಾಸ್ ಹೌಸ್‍ನಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ರಂದೀಪ್ ತಿಳಿಸಿದ್ದಾರೆ.

Translate »