ಹಾಸನ: ಖಾಸಗಿ ಟ್ರಾವೆಲ್ಸ್ ಮಾಲೀಕನ ನಿರ್ಲಕ್ಷ್ಯ ಹಾಗೂ ಬಸ್ ಟೈರ್ ಸ್ಫೋಟದಿಂದ ಇಡೀ ರಾತ್ರಿ ರಸ್ತೆಯಲ್ಲಿ ಕಳೆಯ ಬೇಕಾದ ಘಟನೆ ಬೆಳ್ಳೂರು ಬಳಿ ನಡೆದಿದೆ. ಬೆಂಗಳೂರಿನಿಂದ ಹಾಸನ ಮೂಲಕ ಮಂಗಳೂರಿಗೆ ತೆರಳುತ್ತಿದ್ದ 45 ಪ್ರಯಾಣಿಕರಿದ್ದ ಎಸ್.ಎಂ.ಟ್ರಾವೆಲ್ಸ್ ಬಸ್ಸು ತಡ ರಾತ್ರಿ 1.30ರ ಸಮಯದಲ್ಲಿ ಬೆಳ್ಳೂರು ಕ್ರಾಸ್ ಬಳಿ ಎರಡು ಟೈರುಗಳು ಸ್ಫೋಟ ಗೊಂಡು ಕೆಟ್ಟು ನಿಂತಿತು. ಸ್ಟೆಪ್ನಿ ಇಲ್ಲ ದ್ದರಿಂದ ಪ್ರಯಾಣಿಕರು ಮುಂಜಾನೆವರೆಗೂ ಬಸ್‍ನಲ್ಲೇ ಕಾಲ ಕಳೆಯು ವಂತಾಯಿತು. ಬಸ್ ಕೆಟ್ಟು ನಿಂತ ವಿಷಯ ತಿಳಿಸಲು ಟ್ರಾವೆಲ್ಸ್…