ಖಾಸಗಿ ಬಸ್ ಪಂಚರ್; ಪರದಾಡಿದ ಪ್ರಯಾಣಿಕರು
ಹಾಸನ

ಖಾಸಗಿ ಬಸ್ ಪಂಚರ್; ಪರದಾಡಿದ ಪ್ರಯಾಣಿಕರು

July 8, 2018

ಹಾಸನ: ಖಾಸಗಿ ಟ್ರಾವೆಲ್ಸ್ ಮಾಲೀಕನ ನಿರ್ಲಕ್ಷ್ಯ ಹಾಗೂ ಬಸ್ ಟೈರ್ ಸ್ಫೋಟದಿಂದ ಇಡೀ ರಾತ್ರಿ ರಸ್ತೆಯಲ್ಲಿ ಕಳೆಯ ಬೇಕಾದ ಘಟನೆ ಬೆಳ್ಳೂರು ಬಳಿ ನಡೆದಿದೆ.

ಬೆಂಗಳೂರಿನಿಂದ ಹಾಸನ ಮೂಲಕ ಮಂಗಳೂರಿಗೆ ತೆರಳುತ್ತಿದ್ದ 45 ಪ್ರಯಾಣಿಕರಿದ್ದ ಎಸ್.ಎಂ.ಟ್ರಾವೆಲ್ಸ್ ಬಸ್ಸು ತಡ ರಾತ್ರಿ 1.30ರ ಸಮಯದಲ್ಲಿ ಬೆಳ್ಳೂರು ಕ್ರಾಸ್ ಬಳಿ ಎರಡು ಟೈರುಗಳು ಸ್ಫೋಟ ಗೊಂಡು ಕೆಟ್ಟು ನಿಂತಿತು. ಸ್ಟೆಪ್ನಿ ಇಲ್ಲ ದ್ದರಿಂದ ಪ್ರಯಾಣಿಕರು ಮುಂಜಾನೆವರೆಗೂ ಬಸ್‍ನಲ್ಲೇ ಕಾಲ ಕಳೆಯು ವಂತಾಯಿತು. ಬಸ್ ಕೆಟ್ಟು ನಿಂತ ವಿಷಯ ತಿಳಿಸಲು ಟ್ರಾವೆಲ್ಸ್ ಮಾಲೀ ಕನಿಗೆ ಚಾಲಕ ಹಾಗೂ ಪ್ರಯಾಣಿಕರು ಪ್ರಯತ್ನಿಸಿದರೂ ಆತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಎನ್ನಲಾಗಿದೆ. ಪರ್ಯಾಯ ವ್ಯವಸ್ಥೆ ಕಾಣದೆ ಪ್ರಯಾಣಿಕರು ಮಾಲೀಕ, ಚಾಲಕ, ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ನಗರದ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, ಪ್ರಯಾಣ ಕ ರೊಂದಿಗೆ ಮಾತುಕತೆ ನಡೆಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿದರು.

ನಿಯಂತ್ರಣ ತಪ್ಪಿದ ಖಾಸಗಿ ಬಸ್: ಸಕಲೇಶಪುರದಲ್ಲಿ ತಾಲೂಕಿನ ಗುಲಗಳಲೆ ಸಮೀಪ ಚಾಲಕ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ರಸ್ತೆ ಪಕ್ಕದ ಗುಂಡಿಗೆ ಬಿದ್ದಿದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸುಗಮ ಟ್ರಾವೆಲ್ಸ್‍ನ ಬಸ್ ಅಪಘಾತಕ್ಕೀಡಾಗಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ 7-8 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಯಿಂದ ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಚಾರ ಅಸ್ತವ್ಯಸ್ತ ವಾಗಿತ್ತು. ಸಕಲೇಶಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »