ಮಂಡ್ಯ: ಮಂತ್ರವಾದಿಗಳ ಪ್ರಚೋದನೆಯಿಂದ ದೆಹಲಿಯ ಭಾಟಿಯಾ ಕುಟುಂಬದ 11 ಮಂದಿ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಅದೇ ಮಾದರಿಯಲ್ಲಿ ಮಂಗಳಮುಖಿ ಮಂತ್ರವಾದಿಯೋರ್ವ ಮೋಕ್ಷಕ್ಕಾಗಿ ಮಹಿಳೆಯೋರ್ವಳ ಕುಟುಂಬವನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಮಂಡ್ಯ ತಾಲೂಕಿನ ಮಾರಗೋಡನಹಳ್ಳಿಯ ಅನಿತಾ ಕುಟುಂಬಕ್ಕೆ ಮಂಗಳಮುಖಿ ಮಾಂತ್ರಿಕನೋರ್ವ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ತಾನು ಬೆಳವಾಡಿಯ ಬಳಿ ಕೆಲಸದ ನಿಮಿತ್ತ ಹೋಗಿದ್ದ ವೇಳೆ ಮಂಗಳಮುಖಿ ಮಂತ್ರವಾದಿಯೋರ್ವ “ನಿನ್ನ ಸಾವಿನಿಂದ ಮಕ್ಕಳಿಗೆ ಮುಕ್ತಿ, ಮೋಕ್ಷ…