ಭೇರ್ಯ: ದೇಶದಲ್ಲಿ ಪ್ರಥಮ ಬಾರಿಗೆ ಮೀಸಲಾತಿ ಆದೇಶ ಜಾರಿಗೆ ತಂದ ವರು ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು ಎಂದು ಭಾರತೀಯ ಬಹುಜನ ಯುವ ಸೇನೆಯ ಅಧ್ಯಕ್ಷ ಬಿ.ಬಿ.ಶಿವಣ್ಣ ತಿಳಿಸಿದರು. ಅವರು ಭೇರ್ಯ ಗ್ರಾಮದ ಗಾಂಧಿ ವೃತ್ತದಲ್ಲಿ ಭಾರತೀಯ ಬಹುಜನ ಯುವ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರ 144ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದಲಿತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಇವರ ಆಳ್ವಿಕೆಯಲ್ಲಿ ಉದ್ಯೋಗ, ಆಸ್ತಿ, ಅಧಿಕಾರ ಮತ್ತು ಉಚಿತವಾಗಿ ಭೂಮಿ ಸೇರಿದಂತೆ ಅನೇಕ…