ಭೇರ್ಯದಲ್ಲಿ ಛತ್ರಪತಿ ಶಾಹು ಮಹಾರಾಜರ ಜಯಂತಿ ಆಚರಣೆ
ಮೈಸೂರು

ಭೇರ್ಯದಲ್ಲಿ ಛತ್ರಪತಿ ಶಾಹು ಮಹಾರಾಜರ ಜಯಂತಿ ಆಚರಣೆ

August 3, 2018

ಭೇರ್ಯ: ದೇಶದಲ್ಲಿ ಪ್ರಥಮ ಬಾರಿಗೆ ಮೀಸಲಾತಿ ಆದೇಶ ಜಾರಿಗೆ ತಂದ ವರು ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು ಎಂದು ಭಾರತೀಯ ಬಹುಜನ ಯುವ ಸೇನೆಯ ಅಧ್ಯಕ್ಷ ಬಿ.ಬಿ.ಶಿವಣ್ಣ ತಿಳಿಸಿದರು.

ಅವರು ಭೇರ್ಯ ಗ್ರಾಮದ ಗಾಂಧಿ ವೃತ್ತದಲ್ಲಿ ಭಾರತೀಯ ಬಹುಜನ ಯುವ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರ 144ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಲಿತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಇವರ ಆಳ್ವಿಕೆಯಲ್ಲಿ ಉದ್ಯೋಗ, ಆಸ್ತಿ, ಅಧಿಕಾರ ಮತ್ತು ಉಚಿತವಾಗಿ ಭೂಮಿ ಸೇರಿದಂತೆ ಅನೇಕ ಸೌಲಭ್ಯಗಳಲ್ಲಿ ಶೇ.50ರಷ್ಟು ಮೀಸಲಾತಿಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದು ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾದರು ಎಂದು ಬಣ್ಣಿಸಿದರು.

ಇವರು ತಮ್ಮ ಸಂಸ್ಥಾನದಲ್ಲಿ ಜಾತಿ ಪದ್ದತಿ ನಿರ್ಮೂಲನೆ, ಬಡ್ಡಿ ರಹಿತ ಸಾಲ, ವಿಧವಾ ವಿವಾಹ, ರೈತರ ಅನುಕೂಲಕ್ಕಾಗಿ ಸಹಕಾರಿ ಮಾರುಕಟ್ಟೆಯನ್ನು ಪ್ರಾರಂಭಿಸಿ ಎಲ್ಲರ ವರ್ಗದವರ ಅಭಿ ವೃದ್ಧಿಗೆ ಶ್ರಮಿಸಿದವರು ಎಂದು ಹೇಳಿದರು.

ಇವರ ಮಾದರಿಯಲ್ಲೇ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಹ ಶೇ.75ರಷ್ಟು ಮೀಸಲಾತಿ ನಿಗದಿಮಾಡಿ ಜನ ಸಾಮಾನ್ಯರಿಗೆ ಅನು ಕೂಲ ಕಲ್ಪಿಸಿದ ಧೀಮಂತ ರಾಜರೆಂದು ಪ್ರಖ್ಯಾತಿ ಪಡೆದರು ಎಂದು ಸ್ಮರಿಸಿದರು.

ಇವರ ಜಯಂತಿಯನ್ನು ಎಲ್ಲಾ ಜಾತಿ ಜನಾಂಗದವರು ಆಚರಿಸಬೇಕೆಂದು ಮನವಿ ಮಾಡಿದರು. ನಂತರ ಕೊಲ್ಲಾ ಪುರದ ಛತ್ರಪತಿ ಶಾಹು ಮಹಾರಾಜರ ಭಾವಚಿತ್ರಕ್ಕೆ ನಾಡಗೌಡ ಕುಮಾರಸ್ವಾಮಿ ಮತ್ತು ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯ ಬಿ.ಎಲ್.ರಾಜಶೇಖರ್, ತಾಪಂ ಮಾಜಿ ಸದಸ್ಯ ಸಾದಿಕ್‍ಖಾನ್, ವಿಎಸ್ ಎಸ್‍ಎನ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ಮುಖ್ಯಪೇದೆ ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಖಾಲಿದ್ ಪಾಷ, ಭಾರತೀಯ ಬಹುಜನ ಯುವ ಸೇನೆಯ ಪದಾಧಿಕಾರಿ ಗಳಾದ ಡಿ.ಕೃಷ್ಣ, ಯೊಗೇಶ್.ಬಿ.ಕೆ., ದಿವಾಕರ್, ಮಹೇಶ್, ಅಭಿಷೇಕ್, ಜಯಣ್ಣ, ಅನಿಲ್‍ಕುಮಾರ್, ಲೋಕೇಶ್ ಬಿ.ಡಿ., ಚನ್ನರಾಜು, ದೇವರಾಜು, ಚಿಕ್ಕಯ್ಯ, ನಂಧೀಶ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »