ತೆರೆದ ಪುಸ್ತಕ ಪರೀಕ್ಷೆ ಜಾರಿ ಚಿಂತನೆ ಕ್ರಾಂತಿಕಾರಿ ಹೆಜ್ಜೆ: ಭಾಷಾ ತಜ್ಞ ಅಬ್ದುಲ್ ರೆಹಮಾನ್ ಪಾಷ ಬಣ್ಣನೆ
ಚಾಮರಾಜನಗರ

ತೆರೆದ ಪುಸ್ತಕ ಪರೀಕ್ಷೆ ಜಾರಿ ಚಿಂತನೆ ಕ್ರಾಂತಿಕಾರಿ ಹೆಜ್ಜೆ: ಭಾಷಾ ತಜ್ಞ ಅಬ್ದುಲ್ ರೆಹಮಾನ್ ಪಾಷ ಬಣ್ಣನೆ

July 16, 2018

ಚಾಮರಾಜನಗರ:  ಶಿಕ್ಷಣ ಕ್ಷೇತ್ರದಲ್ಲಿ ತೆರೆದ ಪುಸ್ತಕ ಪರೀಕ್ಷೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿ ರುವುದು ಕ್ರಾಂತಿಕಾರಿ ಹೆಜ್ಜೆ ಎಂದು ಭಾಷಾ ತಜ್ಞ ಹಾಗೂ ಚಲನಚಿತ್ರ ನಿರ್ದೇಶಕ ಅಬ್ದುಲ್ ರೆಹಮಾನ್ ಪಾಷ ಬಣ್ಣಿಸಿದರು.

ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಸಂವಾದ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಸಣ್ಣ ಮಕ್ಕಳಲ್ಲಿ ಇರುವ ಪರೀಕ್ಷಾ ಒತ್ತಡವನ್ನು ನಿವಾರಿಸಲು 1ರಿಂದ 4ನೇ ತರಗತಿವರೆಗೆ ತೆರೆದ ಪುಸ್ತಕ ಪರೀಕ್ಷೆ ಪದ್ಧತಿಯನ್ನು ಜಾರಿ ಗೊಳಿಸಲು ಚಿಂತನೆ ನಡೆಸಿದ್ದೇನೆ ಎಂದು ಹೇಳಿದ್ದರು. ಈ ಬಗ್ಗೆ ರಾಜ್ಯಾದ್ಯಂತ ಚರ್ಚೆ, ವಾದ-ವಿವಾದ ಪ್ರಾರಂಭ ವಾಗಿದೆ. ಆದರೆ ಎನ್.ಮಹೇಶ್ ಅವರ ಈ ಹೇಳಿಕೆ ಕ್ರಾಂತಿಕಾರಿ ಹೇಳಿಕೆ ಎಂದರೆ ತಪ್ಪಾಗಲಾರದು ಎಂದರು.

ವಿದ್ಯಾರ್ಥಿಗಳಲ್ಲಿ ಇರುವ ಪರೀಕ್ಷಾ ಒತ್ತಡ ಕಡಿಮೆ ಆಗಬೇಕಾಗಿದೆ. ಕಂಠಪಾಠದಿಂದ ಏನೇನು ಪ್ರಯೋಜನ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಮಕ್ಕಳಿಗೆ ಭಾಷಾ ಕೌಶಲ್ಯವನ್ನು ಕಲ್ಪಿಸಬೇಕಾಗಿದೆ. ಹೀಗಾಗಿ ‘ತೆರೆದ ಮನಸ್ಸಿನ ಪುಸ್ತಕ ಪರೀಕ್ಷೆ’ ಜಾರಿ ಆಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಹೀಗಿರುವ ಹಳೆಯ ಪರೀಕ್ಷಾ ಪದ್ಧತಿ ಯನ್ನು ಬುಡ ಸಮೇತ ಕಿತ್ತು ಹಾಕಿ, ಹೊಸ ಬುನಾದಿ ಹಾಕಬೇಕಾಗಿದೆ.
ಈಗಿನ ಪರೀಕ್ಷಾ ಪದ್ಧತಿಯಲ್ಲಿ ಇರುವ ದೋಷಗಳನ್ನು ಪಟ್ಟಿ ಮಾಡಿ ಅದನ್ನು ಚಿಂತ ನೆಗೆ ಅಚ್ಚಬೇಕಾಗಿದೆ ಎಂದ ಭಾಷ ತಜ್ಞ ಅಬ್ದುಲ್ ರೆಹಮಾನ್ ಪಾಷ, ಗರಿಷ್ಠ ಮಟ್ಟ ತಲುಪಿರುವ ಈಗಿನ ಪರೀಕ್ಷಾ ಪದ್ಧತಿ ನೋಡಿ ವಿದ್ಯಾರ್ಥಿಗಳು ಹಾಗೂ ಪೋಷ ಕರು ಆತಂಕದಲ್ಲಿ ಇರುವುದು ಸುಳ್ಳಲ್ಲ ಎಂದರು.

‘ತೆರೆದ ಪುಸ್ತಕ ಪರೀಕ್ಷೆ’ ಪದ್ಧತಿ ಜಾರಿ ಗೊಳ್ಳಬೇಕಾದರೆ ನಮ್ಮ ಮುಂದೆ ಹಲವು ಸವಾಲುಗಳು ಇವೆ. ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಬೇಕಾ ಗಿದೆ. ಶಿಕ್ಷಕರು, ವಿದ್ಯಾರ್ಥಿಗಳು, ಪೋಷ ಕರು ಹಾಗೂ ವ್ಯವಸ್ಥೆ ಬದಲಾಗಬೇಕಾ ಗುತ್ತದೆ. ಃ.eಜ ಹಾಗೂ ಆ.eಜ ತರಬೇತಿ ಪದ್ದತಿಯೇ ಬದಲಾಗಬೇಕಾಗುತ್ತದೆ. ಈಗಿನ ಲಕ್ಷಾಂತರ ಶಿಕ್ಷಕರಿಗೆ ತರಬೇತಿ ನೀಡಬೇಕಾಗುತ್ತದೆ. ಇದನ್ನೆಲ್ಲಾ ಮನಸ್ಸಿ ನಲ್ಲಿ ಇಟ್ಟುಕೊಂಡು ಮುಂದಿನ 10 ವರ್ಷ ಯೋಜನೆ ಇದಾಗಿದೆ ಎಂದರು.

ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಮಾತ ನಾಡಿ, ಶಾಲೆಗಳಲ್ಲಿ ಆಡಳಿತಾತ್ಮಕ ಮತ್ತು ಅಕಾಡೆಮಿಕ್ ವಿಭಾಗಗಳು ಇದ್ದು, ಇವು ಪ್ರತ್ಯೇಕ ಆಗಬೇಕು. ಶಿಕ್ಷಕರನ್ನು ಆಡಳಿತಾ ತ್ಮಕ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸ ಬೇಕು. ಆಗ ಶಿಕ್ಷಕರು ವಿದ್ಯಾರ್ಥಿಗಳ ವಿದ್ಯಾ ಭ್ಯಾಸದ ಕಡೆಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತದೆ ಎಂದರು.

ನವದೆಹಲಿ ಅಕ್ಕ ಅಕಾಡೆಮಿಯ ಐಎಎಸ್ ತರಬೇತುದಾರರ ಡಾ.ಶಿವಕುಮಾರ್ ಅಧ್ಯ ಕ್ಷತೆ ವಹಿಸಿದ್ದರು. ಮೈಸೂರು ವಿಶ್ರಾಂತ ಪ್ರಾಂಶು ಪಾಲ ಡಾ.ಹೆಚ್.ಮುದ್ದುಮಲ್ಲೇಶ್, ಶಿಕ್ಷಣ ತಜ್ಞ ಡಾ.ಹೆಚ್.ಎನ್.ವಿಶ್ವನಾಥ್, ಅಖಿಲ ಭಾರತ ಶಿಕ್ಷಣ ಹಕ್ಕು ಸಮಿತಿ ರಾಷ್ಟ್ರೀಯ ಕಾರ್ಯಕಾರಿಣ ಸದಸ್ಯೆ ಮಲ್ಲಿಗೆ, ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ನೇತ್ರಾವತಿ, ಜಿಲ್ಲಾ ಪ್ರೌಢಶಾಲಾ ಮುಖ್ಯೋ ಪಾದ್ಯಾಯರ ಸಂಘದ ಅಧ್ಯಕ್ಷ ಎ.ಶಿವಣ್ಣ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಿ.ಎಸ್. ಕೃಷ್ಣಮೂರ್ತಿ, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಮಹದೇವಯ್ಯ, ಬಿಓ ಲಕ್ಷ್ಮೀಪತಿ ಪ್ರಕಾಶ್, ಮೋಹನ್ ಕುಮಾರ್, ಶಾಂತರಾಜು, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್‍ರಾಜು ಇತರರು ಹಾಜರಿದ್ದರು.

Translate »