ಬೆಂಡರವಾಡಿಯಲ್ಲಿ ಗ್ರಂಥಾಲಯಕ್ಕೆ ಭೂಮಿ ಪೂಜೆ
ಚಾಮರಾಜನಗರ

ಬೆಂಡರವಾಡಿಯಲ್ಲಿ ಗ್ರಂಥಾಲಯಕ್ಕೆ ಭೂಮಿ ಪೂಜೆ

July 16, 2018

ಗುಂಡ್ಲುಪೇಟೆ: ತಾಲೂಕಿನ ಬೆಂಡರವಾಡಿಯಲ್ಲಿ ತುಮ ಕೂರಿನ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಕ್ಷರ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಅವರ ಗೌರವಾರ್ಥ ನಿರ್ಮಿಸುತ್ತಿರುವ ಸುಸಜ್ಜಿತ ಗ್ರಂಥಾಲಯಕ್ಕೆ ಐಎಫ್‍ಎಸ್ ಅಧಿಕಾರಿ ಡಾ.ಆರ್.ರಾಜು ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ತಂದೆಯವರಾದ ಅಕ್ಷರ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಅವರು ಬೆಂಡರವಾಡಿ ಗ್ರಾಮದ ಮೇಲೆ ವಿಶೇಷವಾದ ಪ್ರೀತಿ ಮತ್ತು ಗೌರವವನ್ನು ಇಟ್ಟು ಕಳೆದ 25 ವರ್ಷಗಳ ಹಿಂದೆಯೇ ಗ್ರಂಥಾಲಯ ಸೌಕರ್ಯ ಕಲ್ಪಿಸಿದ್ದರು.

ಇತ್ತೀಚಿಗೆ ಉಪ ಮುಖ್ಯಮಂತ್ರಿ ಡಾ.ಪರ ಮೇಶ್ವರ್ ಅವರು ಭೇಟಿ ನೀಡಿ ಅವರ ತಂದೆಯವರ ಹೆಸರಿನಲ್ಲಿರುವ ಗ್ರಂಥಾ ಲಯವನ್ನು ನೋಡಿ ಇದಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅವಶ್ಯಕವಿರುವ 10 ಲಕ್ಷ ರೂಪಾಯಿಗಳನ್ನು ಸಹಾಯವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಖಂಡ ಡಾ.ಮಾದೇವ್‍ಭರಣಿ ಮಾತ ನಾಡಿ, ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಕಟ್ಟಡವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದು, ಉದ್ಘಾಟನೆ ಯನ್ನು ಮತ್ತು ಇದೇ ಸಂದರ್ಭದಲ್ಲಿ 101 ಜೋಡಿಗಳ ಸಮೂಹಿಕ ವಿವಾಹ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಡಾ.ಕೃಷ್ಣಮೂರ್ತಿ ಚಮರಂ, ಸುಭಾಷ್ ಮಾಡ್ರಹಳ್ಳಿ, ಚಿಕ್ಕಮಾದಯ್ಯ, ಸಿದ್ದರಾಜು, ಶಂಕರ್, ಮಲ್ಲೇಶ್, ಹನುಮಂತು, ಮಹಾ ದೇವಶೆಟ್ಟಿ, ಮನಸ್, ಸೋಮಣ್ಣ, ರಂಗಸ್ವಾಮಿ ಮಾಡ್ರಹಳ್ಳಿ, ಡಾ.ಪ್ರಸನ್ನ ಮತ್ತು ಗ್ರಾಮದ ಮುಖಂಡರು, ಯಜಮಾನರು ಹಾಗೂ ಯುವಕರು ಭಾಗವಹಿಸಿದ್ದರು.

Translate »