ಕೊಂಗಳ್ಳಿ ಬೆಟ್ಟದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ
ಚಾಮರಾಜನಗರ

ಕೊಂಗಳ್ಳಿ ಬೆಟ್ಟದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ

July 16, 2018

ಗುಂಡ್ಲುಪೇಟೆ:  ತಾಲೂಕಿನ ಭಕ್ತರು ಆಷಾಢ ಮಾಸದ ಅಮಾವಾಸ್ಯೆಯ ಅಂಗವಾಗಿ ತಾಳವಾಡಿ ಫಿರ್ಕಾಗೆ ಸೇರಿದ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಆಷಾಢ ಮಾಸದ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಈ ಕಾರಣದಿಂದ ತಾಲೂಕಿನ ಮತ್ತು ಹೆಗ್ಗಡದೇವನಕೋಟೆ ಹಾಗೂ ನಂಜನಗೂಡು ತಾಲೂಕುಗಳಿಂ ದಲೂ ಹೆಚ್ಚಿನ ಭಕ್ತರು ಕೊಂಗಳ್ಳಿ ಮಲ್ಲಿ ಕಾರ್ಜುನಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆಯಲ್ಲಿ ಭಾಗವಹಿಸಿದ್ದರು. ಕೊಂಗಳ್ಳಿ ಬೆಟ್ಟದಲ್ಲಿ ಹರಕೆ ಹೊತ್ತ ಭಕ್ತರು ಹುಲಿವಾಹನ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

Translate »