ಉಚಿತ ಬಸ್‍ಪಾಸ್‍ಗಾಗಿ ಬಿವಿಎಸ್ ಪ್ರತಿಭಟನೆ
ಚಾಮರಾಜನಗರ

ಉಚಿತ ಬಸ್‍ಪಾಸ್‍ಗಾಗಿ ಬಿವಿಎಸ್ ಪ್ರತಿಭಟನೆ

July 17, 2018

ಚಾಮರಾಜನಗರ:  ಎಲ್ಲಾ ಸಮು ದಾಯದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ ನಡೆಯಿತು.

ನಗರದ ಪ್ರವಾಸಿಮಂದಿರ ಆವರಣದಲ್ಲಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್ ರಾಜ್ ಅವರ ನೇತೃತ್ವದಲ್ಲಿ ಸಮಾವೇಶ ಗೊಂಡ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಂಘದ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಹೊರಟು ಸತ್ತಿ ರಸ್ತೆ, ಸುಲ್ತಾನ್ ಷರೀಪ್ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಭುವನೇಶ್ವರ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದ ಆವರಣಕ್ಕೆ ತೆರಳಿ ಉಚಿತ ಬಸ್‍ಪಾಸ್ ನೀಡು ವಂತೆ ಘೋಷಣೆ ಕೂಗಿದರು. ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯಿತ್ರಿ ಅವರ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಸಂಯೋಜಕ ಪರ್ವತ್ ರಾಜ್ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರವು ಎಸ್‍ಸಿ, ಎಸ್‍ಟಿ ವಿದ್ಯಾರ್ಥಿ ಗಳಿಗೆ ಉಚಿತ ಬಸ್‍ಪಾಸ್ ಯೋಜನೆಯನ್ನು 2018-19ನೇ ಸಾಲಿಗೂ ವಿಸ್ತರಿಸಿರುವುದು ಸ್ವಾಗತಾರ್ಹ. ಆದರೆ, ಉಚಿತ ಬಸ್‍ಪಾಸ್ ಯೋಜನೆಯಲ್ಲಿ ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿ ಗಳನ್ನು ಕಡೆಗಣಿಸಿರುವುದು ಖಂಡನೀಯ ಎಂದು ಆರೋಪಿಸಿದರು.

ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಬಸ್‍ಪಾಸ್ ಯೋಜನೆಯಿಂದ ಇತರೆ ಸಮುದಾಯ ವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿಗಳನ್ನು ಅವಮಾನಿಸುವ ಹಾಗೂ ಅವರನ್ನು ಪ್ರತ್ಯೇಕಿ ಸುವ ಮನೋಭಾವನೆ ಮೂಡು ತ್ತದೆ. ರಾಜ್ಯ ಸರ್ಕಾರ ದಲಿತರ ಕ್ಷೇಮಾಭಿವೃದ್ಧಿಯನ್ನು ಬಯಸುವುದಾದರೆ ಖಾಸಗಿ ಕ್ಷೇತ್ರದದಲ್ಲಿ ಮೀಸಲಾತಿ ನೀಡುವುದು, ಬ್ಯಾಕ್‍ಲಾಗ್ ಹುದ್ದೆ ಭರ್ತಿ ಮಾಡುವುದು, ಹಾಸ್ಟೆಲ್ ವಿದ್ಯಾರ್ಥಿಗಳ ಊಟದ ಭತ್ಯೆ, ವಿದ್ಯಾರ್ಥಿ ವೇತನ ಹೆಚ್ಚು ಮಾಡುವುದು, ಪ್ರಾಥಮಿಕ ಶಾಲಾ ಹಂತದಲ್ಲಿ ಇಂಗ್ಲೀóಷ ಶಿಕ್ಷಣ ನೀಡುವ ನಿರ್ಧಾರ ಕೈಗೊಳ್ಳಲಿ ಎಂದರು.

ಎಸ್‍ಸಿ, ಎಸ್‍ಟಿಗೆ ಮಾತ್ರ ಉಚಿತ ಬಸ್‍ಪಾಸ್ ನೀಡಿರುವುದರಿಂದ ಅನಾನು ಕೂಲಗಳೇ ಹೆಚ್ಚಾಗುತ್ತಿದೆ. ಆದರಿಂದ ಉಚಿತ ಬಸ್‍ಪಾಸ್ ಯೋಜನೆಯನ್ನು ಸರ್ಕಾರ ರಾಜ್ಯದ ಎಲ್ಲಾ ಸಮುದಾಯ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿವಿಎಸ್ ಕಾರ್ಯಕರ್ತ ರಾದ ಹರೀಶ್, ನಂಜುಂಡಸ್ವಾಮಿ, ರಾಜೇಂದ್ರ, ವಾಸು, ಸವಿತಾ, ಕೃಷ್ಣಮೂರ್ತಿ, ಆಸ್ರಿತ್, ವೆಂಕಟೇಶ್, ಪದ್ಮಾವತಿ, ಮಮತಾ, ರೂಪಾ, ಹೀನಾ ಕೌಸಕ್, ಪರ್ವಿನ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »