ಬೆಂಗಳೂರು: ಬಿಗ್‍ಬಾಸ್ 6ನೇ ಆವೃತ್ತಿಯ ವಿನ್ನರ್ ಆಗಿ ಚಿಕ್ಕಬಳ್ಳಾಪುರದ ಆಧುನಿಕ ರೈತ ಶಶಿ ಕುಮಾರ್ ಹೊರ ಹೊಮ್ಮಿದ್ದು, 50 ಲಕ್ಷ ರೂ. ಜೊತೆಗೆ ಬಿಗ್ ಬಾಸ್ ಟ್ರೋಫಿಯನ್ನು ತನ್ನ ದಾಗಿಸಿಕೊಂಡಿದ್ದಾರೆ. ಅಲ್ಲದೇ ಗಾಯಕ ನವೀನ್ ಸಜ್ಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಬೆಂಗಳೂರಿನ ಬಿಡದಿ ಬಳಿಯ ಇನ್ನೊವೇಟೀವ್ ಫಿಲಂ ಸಿಟಿ ಯಲ್ಲಿ ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಶಶಿ ಕುಮಾರ್ ಹಾಗೂ ನವೀನ್ ಸಜ್ಜು ಪ್ರಶಸ್ತಿ ಗೆಲ್ಲುವ ಹಂತಕ್ಕೇ ರಿದ್ದರು. ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ…