ಆಧುನಿಕ ರೈತ  ಶಶಿ ಕುಮಾರ್  ಬಿಗ್‍ಬಾಸ್ ವಿನ್ನರ್
ಮೈಸೂರು

ಆಧುನಿಕ ರೈತ ಶಶಿ ಕುಮಾರ್ ಬಿಗ್‍ಬಾಸ್ ವಿನ್ನರ್

January 28, 2019

ಬೆಂಗಳೂರು: ಬಿಗ್‍ಬಾಸ್ 6ನೇ ಆವೃತ್ತಿಯ ವಿನ್ನರ್ ಆಗಿ ಚಿಕ್ಕಬಳ್ಳಾಪುರದ ಆಧುನಿಕ ರೈತ ಶಶಿ ಕುಮಾರ್ ಹೊರ ಹೊಮ್ಮಿದ್ದು, 50 ಲಕ್ಷ ರೂ. ಜೊತೆಗೆ ಬಿಗ್ ಬಾಸ್ ಟ್ರೋಫಿಯನ್ನು ತನ್ನ ದಾಗಿಸಿಕೊಂಡಿದ್ದಾರೆ. ಅಲ್ಲದೇ ಗಾಯಕ ನವೀನ್ ಸಜ್ಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬೆಂಗಳೂರಿನ ಬಿಡದಿ ಬಳಿಯ ಇನ್ನೊವೇಟೀವ್ ಫಿಲಂ ಸಿಟಿ ಯಲ್ಲಿ ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಶಶಿ ಕುಮಾರ್ ಹಾಗೂ ನವೀನ್ ಸಜ್ಜು ಪ್ರಶಸ್ತಿ ಗೆಲ್ಲುವ ಹಂತಕ್ಕೇ ರಿದ್ದರು. ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನವೀನ್ ಸಜ್ಜು ಅವರಿಗೆ ರೈತರ ದಿನಚರಿ ಹಾಗೂ ಆಧುನಿಕ ಕೃಷಿಯ ಬಗ್ಗೆ ತಿಳಿಸುತ್ತಿದ್ದ ಶಶಿಕುಮಾರ್ ತೀವ್ರ ಪೈಪೋಟಿ ನೀಡಿದ್ದರು. ಆದರೆ ಕಿಚ್ಚ ಸುದೀಪ್ ಅವರು ಶಶಿಕುಮಾರ್ ಅವರ ಕೈ ಎತ್ತುವ ಮೂಲಕ ವಿಜೇತ ಎಂದು ಘೋಷಿಸಿದ್ದರು.

ಈ ಬಾರಿಯ ಬಿಗ್‍ಬಾಸ್‍ಗೆ ಶಶಿಕುಮಾರ್, ಆಂಡ್ರ್ಯೂ, ನಯನಾ, ನವೀನ್ ಸಜ್ಜು, ರ್ಯಾಪಿಡ್ ರಶ್ಮಿ, ಅಕ್ಷತಾ, ರಾಕೇಶ್, ಸೋನು ಪಾಟೀಲ್, ಜಯಶ್ರೀ, ಮುರಳಿ, ರಕ್ಷಿತಾ ರೈ, ಆಡಮ್ ಪಾಷ, ಕವಿತಾ ಗೌಡ,

ರವಿ ಸೇರಿದಂತೆ 21 ಮಂದಿಯಲ್ಲಿ ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದವರು ಹಾಗೂ ಸಾಮಾನ್ಯ ಜನರು 6ನೇ ಆವೃತ್ತಿಯ ಬಿಗ್‍ಬಾಗ್‍ಗೆ ತೆರಳಿದ್ದು ವಿಶೇಷವಾಗಿತ್ತು.

ಒಟ್ಟಾರೆ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬಂದ ಬಿಗ್‍ಬಾಸ್‍ಗೆ ತೆರೆ ಬಿದ್ದಿದ್ದು, ಈ ಬಾರಿ ಕೂಡ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ಇದುವರೆಗೆ ಬಿಗ್ ಬಾಸ್ ಕನ್ನಡ ಗೆದ್ದವರು: ಸೀಸನ್ -1 ವಿಜಯ್ ರಾಘವೇಂದ್ರ (ನಟ), ಸೀಸನ್-2 ಅಕುಲ್ ಬಾಲಾಜಿ (ನಿರೂಪಕ), ಸೀಸನ್-3 ಶ್ರುತಿ (ನಟಿ), ಸೀಸನ್-4 ಪ್ರಥಮ್ (ನಿರ್ದೇಶಕ), ಸೀಸನ್-5 ಚಂದನ್ ಶೆಟ್ಟಿ (ಗಾಯಕ).

Translate »