ಮೈಸೂರು: ದ್ವಿಚಕ್ರ ವಾಹನ ಕಳ್ಳನೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತನಿಂದ ಲಕ್ಷ ರೂ. ಮೌಲ್ಯದ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ವೊಂದನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕ್ಯಾತಮಾರನಹಳ್ಳಿಯ ಇಂದಿರಾಗಾಂಧಿ ರಸ್ತೆ ನಿವಾಸಿ ರೆಹಮತ್‍ವುಲ್ಲಾ ಷರೀಪ್ (20) ಬಂಧಿತ. ವೃತ್ತಿಯಲ್ಲಿ ಟಿಂಕರಿಂಗ್ ಕೆಲಸಗಾರನಾದ ಈತನನ್ನು ಶುಕ್ರವಾರ ಮಹಮದ್ ಸೇಠ್ ಬ್ಲಾಕ್‍ನಲ್ಲಿ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನದ ಸಮೇತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಸದರಿ ಬೈಕ್ ಅನ್ನು ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಮೈಸೂರು ಡಿಸಿಪಿ…