ಬೈಕ್ ಕಳ್ಳನ ಬಂಧನ, ಲಕ್ಷ ರೂ. ಮೌಲ್ಯದ ರಾಯಲ್ ಎನ್‍ಫೀಲ್ಡ್ ವಶ
ಮೈಸೂರು

ಬೈಕ್ ಕಳ್ಳನ ಬಂಧನ, ಲಕ್ಷ ರೂ. ಮೌಲ್ಯದ ರಾಯಲ್ ಎನ್‍ಫೀಲ್ಡ್ ವಶ

July 16, 2018

ಮೈಸೂರು:  ದ್ವಿಚಕ್ರ ವಾಹನ ಕಳ್ಳನೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತನಿಂದ ಲಕ್ಷ ರೂ. ಮೌಲ್ಯದ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ವೊಂದನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಕ್ಯಾತಮಾರನಹಳ್ಳಿಯ ಇಂದಿರಾಗಾಂಧಿ ರಸ್ತೆ ನಿವಾಸಿ ರೆಹಮತ್‍ವುಲ್ಲಾ ಷರೀಪ್ (20) ಬಂಧಿತ. ವೃತ್ತಿಯಲ್ಲಿ ಟಿಂಕರಿಂಗ್ ಕೆಲಸಗಾರನಾದ ಈತನನ್ನು ಶುಕ್ರವಾರ ಮಹಮದ್ ಸೇಠ್ ಬ್ಲಾಕ್‍ನಲ್ಲಿ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನದ ಸಮೇತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಸದರಿ ಬೈಕ್ ಅನ್ನು ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಮೈಸೂರು ಡಿಸಿಪಿ ಡಾ.ವಿಕ್ರಂ ವಿ.ಅಮಟೆ ಅವರ ಮಾರ್ಗದರ್ಶನ, ಸಿಸಿಬಿ ಘಟಕದ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಸಿಸಿಬಿ ಪಿಐ ಆರ್.ಜಗದೀಶ್, ಎಎಸ್‍ಐಗಳಾದ ಚಂದ್ರೇಗೌಡ, ಅಲೆಕ್ಸಾಂಡರ್ ಮತ್ತು ಸಿಬ್ಬಂದಿಯಾದ ಎಂ.ಆರ್.ಗಣೇಶ್, ಸಿ.ಚಿಕ್ಕಣ್ಣ, ಲಕ್ಷ್ಮೀಕಾಂತ್, ರಾಮಸ್ವಾಮಿ, ಶಿವರಾಜು, ಯಾಕುಬ್ ಷರೀಫ್, ಅಸ್ಗರ್‍ಖಾನ್, ರಾಜೇಂದ್ರ, ನಿರಂಜನ, ಪ್ರಕಾಶ್, ಆನಂದ್, ಚಾಮುಂಡಮ್ಮ, ಶಿವಕುಮಾರ್, ಗೌತಮ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಸಿಬ್ಬಂದಿಯ ಈ ಕಾರ್ಯಕ್ಕೆ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಎಫ್‍ಕೆಸಿಸಿಐ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿಗೆ ಸನ್ಮಾನ

Translate »