ಬೆಂಗಳೂರು: ಕೇಂದ್ರ ದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿ ಯಲು ಮುಂದಾಗಿರುವ ಬಿಜೆಪಿ ಕರ್ನಾ ಟಕದಿಂದ ಹೆಚ್ಚು ಸ್ಥಾನಗಳನ್ನು ಗಳಿಸಲು ಈಗಿನಿಂದಲೇ ತಂತ್ರಗಾರಿಕೆ ಆರಂಭಿಸಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 22ರಿಂದ 23 ಸ್ಥಾನಗಳಲ್ಲಿ ಜಯಗಳಿಸಲೇಬೇಕೆಂಬ ಗುರಿಯೊಂದಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತೆ ಕರ್ನಾಟಕ ಪ್ರವಾಸ ಆರಂಭಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಇಲ್ಲೇ ಬಿಡಾರ ಹೂಡಿದ್ದ ಷಾ, ಇದೀಗ ಲೋಕಸಭಾ ಚುನಾವಣೆ ಕಡೆ ಗಮನಹರಿಸಿದ್ದಾರೆ. ಇದೇ…