ರಾಜ್ಯದಲ್ಲಿ 22ರಿಂದ 23 ಲೋಕಸಭಾ  ಸ್ಥಾನ ಗೆಲ್ಲುವುದು ಅಮಿತ್ ಷಾ ಗುರಿ
ಮೈಸೂರು

ರಾಜ್ಯದಲ್ಲಿ 22ರಿಂದ 23 ಲೋಕಸಭಾ  ಸ್ಥಾನ ಗೆಲ್ಲುವುದು ಅಮಿತ್ ಷಾ ಗುರಿ

July 18, 2018

ಬೆಂಗಳೂರು:  ಕೇಂದ್ರ ದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿ ಯಲು ಮುಂದಾಗಿರುವ ಬಿಜೆಪಿ ಕರ್ನಾ ಟಕದಿಂದ ಹೆಚ್ಚು ಸ್ಥಾನಗಳನ್ನು ಗಳಿಸಲು ಈಗಿನಿಂದಲೇ ತಂತ್ರಗಾರಿಕೆ ಆರಂಭಿಸಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 22ರಿಂದ 23 ಸ್ಥಾನಗಳಲ್ಲಿ ಜಯಗಳಿಸಲೇಬೇಕೆಂಬ ಗುರಿಯೊಂದಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತೆ ಕರ್ನಾಟಕ ಪ್ರವಾಸ ಆರಂಭಿಸುತ್ತಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಇಲ್ಲೇ ಬಿಡಾರ ಹೂಡಿದ್ದ ಷಾ, ಇದೀಗ ಲೋಕಸಭಾ ಚುನಾವಣೆ ಕಡೆ ಗಮನಹರಿಸಿದ್ದಾರೆ.

ಇದೇ 28ರಂದು ರಾಜ್ಯ ಪ್ರವಾಸ ಕೈಗೊಳ್ಳು ತ್ತಿದ್ದು, ಚುನಾವಣಾ ಪೂರ್ವ ಸಿದ್ಧತೆ ಕಾರ್ಯ ಕ್ರಮ ರೂಪಿಸಿ ಎಂದು ರಾಜ್ಯ ಘಟಕಕ್ಕೆ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂ ರಪ್ಪ ಜುಲೈ 21 ರಂದು ಕೋರ್ ಕಮಿಟಿ ಸಭೆ ಕರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಲೆ ಇದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಆಡಳಿತದ ನಡುವೆಯೂ 17 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಕರ್ನಾಟಕದಲ್ಲಿ ರಾಜಕೀಯ ಸ್ಥಿತಿ ಬದ ಲಾಗಿದೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು ಮೈತ್ರಿ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯನ್ನು ಜಂಟಿಯಾಗಿ ಎದುರಿಸಿದರೆ ನಾವು ಹೇಗೆ ಚುನಾವಣಾ ಕಣದಲ್ಲಿ ಮಣಿಸಬೇಕೆಂಬುದೇ ಷಾ ಅವರು ಮೊದಲ ಸಭೆಯಲ್ಲಿ ಇಡುವ ಪ್ರಶ್ನೆಯಾಗಿದೆ.

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಉಪ ಚುನಾವಣೆಗಳು ಕಾಂಗ್ರೆಸ್ ಪಾಲಾಗಿವೆ, ಅದರಲ್ಲಿ ನಮ್ಮ ತೆಕ್ಕೆಯಲ್ಲಿದ್ದ ಒಂದು ಕ್ಷೇತ್ರ ಕಸಿದುಕೊಂಡಿದ್ದಾರೆ. ಚುನಾ ವಣೆಯನ್ನು ಗಂಭಿರವಾಗಿ ತೆಗೆದುಕೊಳ್ಳಬೇಕು, ಮೈತ್ರಿಯಿಂದ ಆಗುವ ಲಾಭ ಮತ್ತು ನಷ್ಟವನ್ನು ಮೊದಲು ಅಧ್ಯಯನ ಮಾಡಿ ನಮ್ಮ ಕಾರ್ಯತಂತ್ರ ರೂಪಿಸ ಬೇಕಿದೆ. ಇದಕ್ಕೆ
ಸಿದ್ಧತೆ ಮಾಡಿಕೊಳ್ಳಿ ಎಂದು ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಘಟಕಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕೋರ್ ಕಮಿಟಿ ಸಭೆ ಕರೆದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕೈಗೊಂಡಂತಹ ತಂತ್ರಗಳನ್ನೇ ಅನುಸರಿಸಬೇಕೇ ಅಥವಾ ಹೊಸ ಕಾರ್ಯತಂತ್ರ ಹೆಣೆಯಬೇಕೇ ಎಂಬ ಬಗ್ಗೆ ತಮ್ಮ ಭೇಟಿ ಸಂದರ್ಭದಲ್ಲಿ ಸ್ಥಳೀಯ ನಾಯಕರ ಜತೆ ಷಾ ಚರ್ಚೆ ಮಾಡಲಿದ್ದಾರೆ. ಭೇಟಿಗೂ ಮುನ್ನ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಹಿನ್ನಡೆ, ನಿರೀಕ್ಷಿತ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗದಿರುವುದು, ರಾಜಧಾನಿ ಬೆಂಗಳೂರು, ಬಳ್ಳಾರಿ, ಬೀದರ್, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಾರದಿರುವ ಬಗ್ಗೆಯೂ ಯಡಿಯೂರಪ್ಪ ಮಾಹಿತಿ ಪಡೆಯಲಿದ್ದಾರೆ.

ವಿಧಾನಸಭೆ ಚುನಾವಣೆಗೆ ಮುನ್ನ ಮಿಷನ್-150 ಎಂದು ಹೇಳಿದ್ದರೂ, ಬಿಜೆಪಿ ತಲುಪಿದ್ದು 104, ಗೆದ್ದೇ ಗೆಲ್ಲುತ್ತೇವೆ ಎಂದು ಅತಿಯಾದ ಆತ್ಮ ವಿಶ್ವಾಸ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಯಾವ ಕಾರಣಕ್ಕಾಗಿ ಸೋಲು ಉಂಟಾಯಿತು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ಬಿಟ್ಟು ಗೆಲುವನ್ನೇ ಮಾನದಂಡವಾಗಿ ಇಟ್ಟುಕೊಂಡು ಹೋರಾಟ ನಡೆಸಲು ರಾಜ್ಯ ಘಟಕ ಅಂದಿನ ಸಭೆಯಲ್ಲಿ ಕಾರ್ಯಕ್ರಮ ರೂಪಿಸಲಿದೆ. ಯಡಿಯೂರಪ್ಪ ಅಲ್ಲದೆ ಇತರೆ ಸದಸ್ಯರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ನಳಿನ್ ಕುಮಾರ್ ಕಟೀಲ್, ಈಶ್ವರಪ್ಪ, ಆರ್.ಅಶೋಕ್ ಭಾಗವಹಿಸಲಿದ್ದಾರೆ.

Translate »