ಮಡಿಕೇರಿ : ವಾಣಿಜ್ಯ ಸಚಿವಾಲಯದ ನಿಯಮಗಳನ್ನು ಮೀರಿ ವಿದೇಶದಿಂದ ಕರಿಮೆಣಸು ಆಮದು ವಹಿವಾಟು ಕೈಗೊಳ್ಳುತ್ತಿರುವ ಬೆಂಗಳೂರಿನ ಇಂಡಿಯಾ ಪ್ರಾಡಕ್ಟ್ ಸಂಸ್ಥೆಯ ವಿರುದ್ಧ ಕರಿಮೆಣಸು ಬೆಳೆಗಾರರ ಸಮನ್ವಯ ವೇದಿಕೆ ವತಿಯಿಂದ ಸಾಂಕೇತಿಕ ಪ್ರತಿಭಟನೆ ಕೈಗೊಂಡು ನಿಯಮಬಾಹಿರ ವಹಿವಾಟು ನಡೆಸದಂತೆ ಎಚ್ಚರಿಸಲಾಯಿತು. ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ಆಶ್ರಯದಲ್ಲಿ ಬೆಂಗಳೂರಿನ ಕೊಡವ ಸಮಾಜದಲ್ಲಿ ಜಮಾವಣೆಗೊಂಡ ಬಳಿಕ ದಕ್ಷಿಣ ಭಾರತದ ವಿವಿಧ ಬೆಳೆಗಾರ ಸಂಘಟನೆಗಳಾದ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಬೆಳೆಗಾರರ ಸಂಘ, ಕೊಡಗು ಜಿಲ್ಲಾ…