ಮೈಸೂರು,ಫೆ.೧(ಪಿಎಂ)- ಸಾರ್ವ ಜನಿಕ ಉದ್ದಿಮೆಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್‌ನ ಮೈಸೂರು ಉತ್ಪಾದನಾ ಘಟಕದ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಹೂಟಗಳ್ಳಿ-ಕೆಆರ್‌ಎಸ್ ರಸ್ತೆಯ ಕಾರ್ಖಾನೆ ಮುಖ್ಯ ದ್ವಾರದಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಬಳಿಕ ಕಾರ್ಮಿಕರು ಕರ್ತವ್ಯಕ್ಕೆ ತೆರಳಿ ದರು. ಇದೇ ರೀತಿ ಫೆ.೫ರವರೆಗೆ ಪ್ರತಿಭಟನೆ…