ರಾಜ್ಯ, ಹೊರ ರಾಜ್ಯಗಳಿಂದ ಸುಮಾರು 500 ಲೋಗೋ ಸ್ವೀಕೃತಿ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ನಂತರ ಆಯ್ಕೆ ಸಮಿತಿಯಿಂದ ಪ್ರಕ್ರಿಯೆಗೆ ಮರು ಚಾಲನೆ ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿಗೆ ಅಚ್ಚಳಿಯದೇ ಉಳಿಯುವ ಪ್ರಸಿದ್ಧ ಹಾಗೂ ಖಾಯಂ ಲಾಂಛನವೊಂದನ್ನು ರೂಪಿಸಬೇಕೆಂಬ ಜಿಲ್ಲಾಡಳಿತದ ಮಹತ್ವದ ಯೋಜನೆ ಕೊಂಚ ವಿಳಂಬವಾಗಿದೆ.ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಹಕಾರದಿಂದ ಬ್ರಾಂಡ್ ಮೈಸೂರು ಲೋಗೋ ಮತ್ತು ಟ್ಯಾಗ್ ಲೈನ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಲೋಗೋ ಮತ್ತು…