Tag: Bullet Bike Thefts

ಮೈಸೂರಲ್ಲಿ ಹೆಚ್ಚಿದ ಬುಲೆಟ್ ಬೈಕ್‍ಗಳ ಕಳವು
ಮೈಸೂರು

ಮೈಸೂರಲ್ಲಿ ಹೆಚ್ಚಿದ ಬುಲೆಟ್ ಬೈಕ್‍ಗಳ ಕಳವು

June 25, 2018

ಮೈಸೂರು: ಮೈಸೂರು ನಗರದಲ್ಲಿ ಬುಲೆಟ್ ಬೈಕುಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಬುಲೆಟ್ ಬೈಕುಗಳ ಕಳವು ಸಂಬಂಧ ಇತ್ತೀಚೆಗಷ್ಟೇ ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆಸಿದ ಕ್ರೈಂ ರಿವ್ಯೂ ಸಭೆಯಲ್ಲಿ ದ್ವಿಚಕ್ರ ವಾಹನಗಳು ಅದರಲ್ಲೂ ಬುಲೆಟ್ ಬೈಕುಗಳ ಕಳ್ಳತನ ನಿಯಂತ್ರಿಸುವಂತೆ ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. 2018ರ ಜನವರಿಯಿಂದ ಜೂನ್ ತಿಂಗಳವರೆಗೆ ಒಟ್ಟು 123 ದ್ವಿಚಕ್ರ ವಾಹನಗಳು ಕಳ್ಳತನವಾಗಿದ್ದು, 37 ಪತ್ತೆಯಾಗಿವೆ….

Translate »