ಮೈಸೂರು: ಚಿಣ್ಣರೂ ಸೇರಿದಂತೆ ಎಲ್ಲಾ ವಯೋಮಾನದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ `ಚಿಟ್ಟೆಗಳ ಉದ್ಯಾನವನ’ ಮತ್ತೊಮ್ಮೆ ತಲೆ ಎತ್ತಲಿದೆ. ಕಾರಂಜಿಕರೆಯ ಆವರಣದಲ್ಲಿ ಚಿಟ್ಟೆ ಗಳ ಉದ್ಯಾನವನ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ 20 ಲಕ್ಷ ರೂ. ನೀಡಿದ್ದು, ಮೃಗಾಲಯವು ಈಗಾಗಲೇ ಕಾಮಗಾರಿ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಕಾರಂಜಿ ಕೆರೆಯ ಆವರಣದಲ್ಲಿ ನ್ಯಾಚ್ಯುರಲ್ ಹಿಸ್ಟರಿ ಮ್ಯೂಸಿಯಂ ಕಟ್ಟಡಕ್ಕೆ ಹೊಂದಿಕೊಂಡಂತೆ ಕಳೆದ 8 ವರ್ಷದ ಹಿಂದೆಯೇ ಚಿಟ್ಟೆಗಳ ಉದ್ಯಾನವನ ನಿರ್ಮಿಸಲಾಗಿತ್ತು. ಈ ಉದ್ಯಾನವನ ದಲ್ಲಿ ಬಣ್ಣಬಣ್ಣದ ಬಗೆಬಗೆಯ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು….