ಹೆಚ್.ಡಿ.ಕೋಟೆ: ಮಾಜಿ ಶಾಸಕ ಚಿಕ್ಕಣ್ಣ ಅವರು ಸೋಲಿನ ಹತಾಶೆ ಯಿಂದ ಸುಳ್ಳು ಆರೋಪವನ್ನು ಮಾಡುತ್ತಿದ್ದು, ನಾವು ಯಾವುದೇ ವರ್ಗಾವಣೆ ದಂಧೆಯನ್ನು ಮಾಡುತ್ತಿಲ್ಲ ಎಂದು ಶಾಸಕ ಸಿ.ಅನಿಲ್‍ಕುಮಾರ್ ತಿಳಿಸಿದರು. ತಾಲೂಕಿನ ನುಗು ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ಚಿಕ್ಕಣ್ಣ ಅವರ ಅವಧಿಯಲ್ಲಿ ಅಂತಹ ಅಕ್ರಮ ದಂಧೆಗಳು ನಡೆದಿರಬಹುದು, ವರ್ಗಾವಣೆ ವಿಚಾರ ದಲ್ಲಿ ರಾಜ್ಯಾದ್ಯಂತ ಸರ್ಕಾರವೇ ಸಾಕಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ನಾವು ಯಾವುದೇ ವರ್ಗಾವಣೆಯನ್ನು ಮಾಡುತ್ತಿಲ್ಲ ಎಂದರು.ತಾಲೂಕಿನ ಅಧಿಕಾರಿಗಳು ಯಾವುದಾದರೂ ಅಕ್ರಮ ಹಾಗೂ…