ಸೋಲಿನ ಹತಾಶೆಯಿಂದ ಚಿಕ್ಕಣ್ಣ ಸುಳ್ಳು ಆರೋಪ
ಮೈಸೂರು

ಸೋಲಿನ ಹತಾಶೆಯಿಂದ ಚಿಕ್ಕಣ್ಣ ಸುಳ್ಳು ಆರೋಪ

August 3, 2018

ಹೆಚ್.ಡಿ.ಕೋಟೆ: ಮಾಜಿ ಶಾಸಕ ಚಿಕ್ಕಣ್ಣ ಅವರು ಸೋಲಿನ ಹತಾಶೆ ಯಿಂದ ಸುಳ್ಳು ಆರೋಪವನ್ನು ಮಾಡುತ್ತಿದ್ದು, ನಾವು ಯಾವುದೇ ವರ್ಗಾವಣೆ ದಂಧೆಯನ್ನು ಮಾಡುತ್ತಿಲ್ಲ ಎಂದು ಶಾಸಕ ಸಿ.ಅನಿಲ್‍ಕುಮಾರ್ ತಿಳಿಸಿದರು.

ತಾಲೂಕಿನ ನುಗು ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ಚಿಕ್ಕಣ್ಣ ಅವರ ಅವಧಿಯಲ್ಲಿ ಅಂತಹ ಅಕ್ರಮ ದಂಧೆಗಳು ನಡೆದಿರಬಹುದು, ವರ್ಗಾವಣೆ ವಿಚಾರ ದಲ್ಲಿ ರಾಜ್ಯಾದ್ಯಂತ ಸರ್ಕಾರವೇ ಸಾಕಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ನಾವು ಯಾವುದೇ ವರ್ಗಾವಣೆಯನ್ನು ಮಾಡುತ್ತಿಲ್ಲ ಎಂದರು.ತಾಲೂಕಿನ ಅಧಿಕಾರಿಗಳು ಯಾವುದಾದರೂ ಅಕ್ರಮ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವ ಕೆಲಸವನ್ನು ಮಾಡುತ್ತಿದ್ದರೆ ನನ್ನ ಗಮನಕ್ಕೆ ತರಲಿ, ಆ ಬಗ್ಗೆ ನಾನು ಕ್ರಮ ಕೈಗೊಳ್ಳುತ್ತೇನೆ ಎಂದರು.

ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಹರೀಶ್ ಹಾಗೂ ಇತರೆ ಅಧಿಕಾರಿಗಳು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ. ಅಂತಹವರನ್ನೇ ವರ್ಗಾವಣೆ ಮಾಡಿ ಎಂದರೆ ಅದು ಹೇಗೆ ಸಾಧ್ಯ ಎಂದರು.

ಐಟಿಐ ಕಾಲೇಜ್ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿ ಅವರ ಅವಧಿಯಲ್ಲಿ ಮಂಜೂರಾತಿಯಾಗಿದ್ದು, ನೆನೆಗುದಿಗೆ ಬಿದ್ದಿದ್ದರೆ ಆ ಬಗ್ಗೆ ನನಗೆ ಮಾಹಿತಿ ನೀಡಲಿ. ಅದೆಲ್ಲವನ್ನು ಮುಂದುವರೆಸು ತ್ತೇನೆ, ಆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದರು.ಗೋಷ್ಠಿಯಲ್ಲಿ ಚಿಕ್ಕವೀರನಾಯ್ಕ, ಮನುಗನಹಳ್ಳಿ ಮಾದಪ್ಪ, ಕೆಂಡಗಣ್ಣ ಸ್ವಾಮಿ, ಬಿ.ಸಿ.ಬಸಪ್ಪ, ಸಿದ್ದರಾಮೇಗೌಡ ಇದ್ದರು.

Translate »