ಮಂಡ್ಯ: ನಾಮಕರಣಕ್ಕೆ ಹೋಗುತಿದ್ದ ಪ್ರಯಾಣಿಕರ ಕಾರು ಅಪಘಾತ ಕ್ಕೀಡಾಗಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯ ಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಒಡೆಯರಹಳ್ಳಿ ಬಳಿ ಇಂದು ನಡೆದಿದೆ. ತುರುವೆಕೆರೆಯ ಸಂತೋಷ್ ಬಿನ್ ಮಂಜುನಾಥ್(23) ಸಾವನ್ನಪ್ಪಿದ್ದು, ವಿನೋದ್, ವಿಜಯ್ ಕುಮಾರ್, ಚೌಡೇಶ್ ಕುಮಾರ್, ನವನೀತ್ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ: ಸಂತೋಷ್ ಅವರನ್ನೊಳ ಗೊಂಡ ಸ್ನೇಹಿತರ ತಂಡ ಕಾರ್ (ಕೆ.ಎ.06. ಡಿ.8182)ನಲ್ಲಿ ಬೆಂಗಳೂರಿನಿಂದ ಎ.ಸಿ.ಗಿರಿಗೆ ಬರುತ್ತಿದ್ದರು. ಮಾರ್ಗ ಮಧ್ಯೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಹೆಚ್.75 ರಸ್ತೆಯಲ್ಲಿ ವಡೇರ ಹಳ್ಳಿ ಗೇಟ್…