ನಾಮಕರಣಕ್ಕೆ ಹೋಗುತ್ತಿದ್ದ ಪ್ರಯಾಣಿಕರ ಕಾರು ಅಪಘಾತ
ಮಂಡ್ಯ

ನಾಮಕರಣಕ್ಕೆ ಹೋಗುತ್ತಿದ್ದ ಪ್ರಯಾಣಿಕರ ಕಾರು ಅಪಘಾತ

July 9, 2018

ಮಂಡ್ಯ: ನಾಮಕರಣಕ್ಕೆ ಹೋಗುತಿದ್ದ ಪ್ರಯಾಣಿಕರ ಕಾರು ಅಪಘಾತ ಕ್ಕೀಡಾಗಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯ ಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಒಡೆಯರಹಳ್ಳಿ ಬಳಿ ಇಂದು ನಡೆದಿದೆ.

ತುರುವೆಕೆರೆಯ ಸಂತೋಷ್ ಬಿನ್ ಮಂಜುನಾಥ್(23) ಸಾವನ್ನಪ್ಪಿದ್ದು, ವಿನೋದ್, ವಿಜಯ್ ಕುಮಾರ್, ಚೌಡೇಶ್ ಕುಮಾರ್, ನವನೀತ್ ಗಾಯಗೊಂಡಿದ್ದಾರೆ.

ಘಟನೆ ಹಿನ್ನೆಲೆ: ಸಂತೋಷ್ ಅವರನ್ನೊಳ ಗೊಂಡ ಸ್ನೇಹಿತರ ತಂಡ ಕಾರ್ (ಕೆ.ಎ.06. ಡಿ.8182)ನಲ್ಲಿ ಬೆಂಗಳೂರಿನಿಂದ ಎ.ಸಿ.ಗಿರಿಗೆ ಬರುತ್ತಿದ್ದರು. ಮಾರ್ಗ ಮಧ್ಯೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಹೆಚ್.75 ರಸ್ತೆಯಲ್ಲಿ ವಡೇರ ಹಳ್ಳಿ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಹೋಗಿದೆ. ಪರಿಣಾಮ ಕಾರಿನಲ್ಲಿದ್ದ 5 ಜನರಲ್ಲಿ ಸಂತೋಷ್ ಬಿನ್ ಮಂಜುನಾಥ್ ಸಾವನ್ನಪ್ಪಿದ್ದಾರೆ ಹಾಗೂ ಕಾರಿನಲ್ಲಿದ್ದ ವಿನೋದ್, ವಿಜಯ್ ಕುಮಾರ್, ಚೌಡೇಶ್ ಕುಮಾರ್ ಗಾಯಗೊಂಡಿದ್ದು ನವನೀತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಾಲಕ ಚೌಡೇಶ್ ಕುಮಾರ್‍ರಿಂದ ಕಾರು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. 3 ಜನ ಗಾಯಳುಗಳು ಎ.ಸಿ.ಗಿರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರೆಲ್ಲರೂ ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ. ಇವರೆಲ್ಲರೂ ಚುಂಚನಗಿರಿಯ ಲ್ಲಿಂದು ನಡೆಯುತ್ತಿದ್ದ ನಾಮಕರಣ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »