ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಆಗ್ರಹ ಗೋಣಿಕೊಪ್ಪಲು: ಕೊಡಗಿನಲ್ಲಿ ಜೀವನಾಧಾರಕ್ಕೆ ಬೇಕಾದ ಅಭಿವೃದ್ದಿ ಕೆಲಸಗಳು ಆಗಬೇಕಿದೆಯೇ ಹೊರತು ರೈಲ್ವೆ ಮಾರ್ಗದಂತಹ ಮಾರಕ ಯೋಜನೆ ಗಳು ಬೇಡ ಎಂಬ ಸಂದೇಶವನ್ನು ಇಲ್ಲಿನ ಕಾವೇರಿ ಕಾಲೇಜಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಪುಚ್ಚಿಮಾಡ ದಿ. ತಿಮ್ಮಯ್ಯ, ದಿ. ಚೋಂದಮ್ಮ ತಿಮ್ಮಯ್ಯ ಹಾಗೂ ದಿ. ಮೀನಾ ಸುಬ್ಬಯ್ಯ ಜ್ಞಾಪ ಕಾರ್ಥ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭಾಷಣ…