ಜೀವನಾಧಾರ ಅಭಿವೃದ್ಧಿ ಬೇಕು… ರೈಲ್ವೆ ಮಾರ್ಗದಂತಹ ಮಾರಕ ಯೋಜನೆ ಬೇಡ
ಕೊಡಗು

ಜೀವನಾಧಾರ ಅಭಿವೃದ್ಧಿ ಬೇಕು… ರೈಲ್ವೆ ಮಾರ್ಗದಂತಹ ಮಾರಕ ಯೋಜನೆ ಬೇಡ

August 13, 2018

ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಆಗ್ರಹ
ಗೋಣಿಕೊಪ್ಪಲು: ಕೊಡಗಿನಲ್ಲಿ ಜೀವನಾಧಾರಕ್ಕೆ ಬೇಕಾದ ಅಭಿವೃದ್ದಿ ಕೆಲಸಗಳು ಆಗಬೇಕಿದೆಯೇ ಹೊರತು ರೈಲ್ವೆ ಮಾರ್ಗದಂತಹ ಮಾರಕ ಯೋಜನೆ ಗಳು ಬೇಡ ಎಂಬ ಸಂದೇಶವನ್ನು ಇಲ್ಲಿನ ಕಾವೇರಿ ಕಾಲೇಜಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದರು.

ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಪುಚ್ಚಿಮಾಡ ದಿ. ತಿಮ್ಮಯ್ಯ, ದಿ. ಚೋಂದಮ್ಮ ತಿಮ್ಮಯ್ಯ ಹಾಗೂ ದಿ. ಮೀನಾ ಸುಬ್ಬಯ್ಯ ಜ್ಞಾಪ ಕಾರ್ಥ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಕೊಡಗಿ ನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಮಾರಕ ಯೋಜನೆಗಳಿಗೆ ವಿರೋಧ ವ್ಯಕ್ತ ಪಡಿಸಿದರು. ಇರುವ ರಸ್ತೆಯ ಗುಣಮಟ್ಟದ ಅಭಿವೃದ್ದಿಯಾಗಬೇಕಿದೆ. ಪ್ರಯಾಣಿಕರ ತಂಗುದಾಣ, ಶೌಚಗೃಹ, ಗ್ರಾಮೀಣ ರಸ್ತೆ ಅಭಿವೃದ್ದಿ ಇಂತಹವುಗಳಿಗೆ ಸರ್ಕಾರ ಒತ್ತು ನೀಡಬೇಕು. ರೈಲ್ವೆ, ಹೈಟೆನ್ಸನ್ ಅಂತಹ ಯೋಜನೆಗಳಿಂದ ದೂರವಿರುವಂತೆ ಆಗ್ರಹಿ ಸಿದರು. ಬಹುತೇಕ ಸ್ಪರ್ಧಿಗಳು ಮಾರಕ ಯೋಜನೆಗಳಿಂದಾಗುವ ದುಷ್ಪರಿಣಾಮದ ಬಗ್ಗೆ ಬೆಳಕು ಚೆಲ್ಲಿದರು. ಜಿಲ್ಲೆಯ ವಿವಿಧ 20 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕನ್ನಡದಲ್ಲಿ ‘ಆಧುನಿಕ ಯೋಜನೆಗಳು ಕೊಡಗಿನ ಪರಿಸರಕ್ಕೆ ಮಾರಕವೇ’ ಎಂಬ ವಿಷಯದಲ್ಲಿ ಹಾಗೂ ಆಂಗ್ಲಭಾಷೆಯಲ್ಲಿ ಮೈ ರೈಟ್ಸ್ ರೆಸ್ಪಾನ್ಸಿಬಿಲಿಟೀಸ್ ಅಂಡ್ ಡ್ಯೂಟೀಸ್ ಟುವರ್ಡ್ಸ್ ಮೈ ಮದರ್ ಲ್ಯಾಂಡ್ ವಿತಿನ್ ಫ್ರೇಮ್ ವಕ್ರ್ಸ್ ಆಫ್ ಅವರ್ ಕಾನ್ಸ್ಟಿಟ್ಯೂಷನ್ ಎಂಬ ವಿಷಯದ ಕುರಿತು ಭಾಷಣ ನಡೆಯಿತು.

ಫಲಿತಾಂಶ: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿ ಹೆಚ್.ಎನ್. ದರ್ಶನ್ ಪ್ರಥಮ, ಅರ್ವತೊಕ್ಲು ವಿದ್ಯಾನಿಕೇ ತನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಎಸ್.ಎಂ.ಪೊನ್ನಮ್ಮ ದ್ವಿತೀಯ, ಆಂಗ್ಲ ಭಾಷೆಯ ಭಾಷಣ ಸ್ಪರ್ಧೆಯಲ್ಲಿ ವಿರಾಜ ಪೇಟೆ ಸಂತ ಅನ್ನಮ್ಮ ಕಾಲೇಜು ವಿದ್ಯಾ ರ್ಥಿನಿ ಪಿ.ಕೆ.ರಿಯಾ ಪ್ರಥಮ, ಹಳ್ಳಿಗಟ್ಟು ಸಿಐಟಿ ಕಾಲೇಜಿನ ಗ್ರೀಷ್ಮಾ ಗಂಗಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು.

ಪ್ರಥಮ ಸಮಗ್ರ ಪ್ರಶಸ್ತಿಯನ್ನು ಅರ್ವ ತೊಕ್ಲು ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಎಸ್.ಎಂ.ಪೊನ್ನಮ್ಮ ಮತ್ತು ಡಿ.ಟಿ.ಪೊನ್ನಮ್ಮ ಜೋಡಿ ಪಡೆದುಕೊಂಡರು, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು

Translate »