ಕರುಳಕುಡಿ ನೋಡಲು ಉಸಿರು ಬಿಗಿ ಹಿಡಿದ ತಾಯಿ
ಹಾಸನ

ಕರುಳಕುಡಿ ನೋಡಲು ಉಸಿರು ಬಿಗಿ ಹಿಡಿದ ತಾಯಿ

August 13, 2018

ಹಾಸನ: ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪತ್ನಿಯನ್ನು ಬಿಟ್ಟು ಮಗುವಿನೊಂದಿಗೆ ಪತಿ ಪರಾರಿಯಾಗಿದ್ದು, ಉಸಿರು ಬಿಡುವ ಮುನ್ನ ಕಂದನ ಮುಖ ನೋಡಲು ತಾಯಿ ಜೀವವನ್ನು ಭದ್ರವಾಗಿ ಹಿಡಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತಾಲೂಕಿನ ಕೋರಳ್ಳಿ ಗ್ರಾಮದಲ್ಲಿರುವ ಗಂಗಾ ಅವರ ಪುತ್ರಿ ರೂಪಶ್ರೀ(24) ಕಿಡ್ನಿ ವೈಫಲ್ಯಕ್ಕೆ ತುತ್ತಾದ ತಾಯಿ. ಈಕೆನ್ನು 2 ವರ್ಷಗಳ ಹಿಂದೆ ಆಲೂರು ತಾಲೂಕು ರಾಜನಹಳ್ಳಿ ನಿವಾಸಿ ಭುವನೇಶ್(ಮಹೇಶ್) ನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಲಿಕ್ಕರ್ಸ್ ಶಾಪೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ನಗರದ ಸಮೀಪ ದಾಸರ ಕೊಪ್ಪಲು ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು.

ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಗೆ ಮೊದಲು ಗಂಡು ಮಗುವಾಗಿತ್ತು. ಈ ವೇಳೆ ರೂಪಶ್ರೀ ದೇಹದ ಸ್ಥಿತಿ ಅರಿತ ವೈದ್ಯರು, ಇನ್ನು 2 ವರ್ಷದವರೆಗೂ ಮತ್ತೊಂದು ಮಗು ಪಡೆಯಲು ಪ್ರಯತ್ನಿಸಬೇಡಿ ಎಂದು ಸಲಹೆ ನೀಡಿದ್ದರು. ಆದರೆ ಮೊದಲ ಮಗುವಾದ ನಾಲ್ಕು ತಿಂಗಳ ಅಂತರದಲ್ಲೇ ಮತ್ತೆ ಗರ್ಭಿಣಿಯಾದ ಪರಿಣಾಮ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾ ಯಿತು. ಆಕೆಯ ಪ್ರಾಣಕ್ಕೆ ಅಪಾಯ ಇದ್ದುದ ರಿಂದ ಆಪರೇಷನ್ ಮಾಡಿ ಮಗುವನ್ನು ತೆಗೆಯಲಾಯಿತು. ಆಕೆಯ ಸ್ಥಿತಿ ಗಂಭೀರ ವಾಗಿದ್ದರಿಂದ ಇಲ್ಲಿಂದ ಬೆಂಗಳೂರು ಆಸ್ಪತ್ರೆಗೆ ಹೋಗಲು ಸೂಚಿಸಿದರು. ಅಸ ಹಾಯಕವಾದ ಕುಟುಂಬ ರೂಪಶ್ರೀಯನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖ ಲಿಸಿದಾಗ ಈಕೆಗೆ ಕಿಡ್ನಿ ವೈಫಲ್ಯ ಇರುವುದು ತಿಳಿದು ಬಂದಿದೆ. ಆದರೆ ಈ ವೇಳೆಎ ಜೊತೆಗಿದ್ದ ಧೈರ್ಯ ನೀಡಬೇಕಿದ್ದ ಪತಿ ಭುವನೇಶ್ ಕಳೆದ ಮೂರು ತಿಂಗಳಿನಿಂದಿ ಹಸುಗೂಸಿನೊಂದಿಗೆ ನಾಪತ್ತೆಯಾಗಿದ್ದಾನೆ.

ರೂಪಶ್ರೀ ಕುಟುಂಬದವರು ಕರೆ ಮಾಡಿದರೇ ನನಗೆ ಹೆಂಡತಿ ಬೇಡ, ಮಗು ಸಾಕು ಎಂದು ತಿಳಿಸಿದ್ದು, ಪತ್ನಿ ಕರೆಗೂ ಸಿಗದೆ ಫೋನ್ ಸ್ವಿಚ್‍ಆಫ್ ಮಾಡಿಕೊಂಡಿ ದ್ದಾನೆ. ಈಕೆಯ ಚಿಕಿತ್ಸೆಯ ವಚ್ಚವನ್ನು ಸದ್ಯ ತಾಯಿಯೇ ಭರಿಸುತ್ತಿದ್ದು, ಅಂಚಿನ ಲ್ಲಿರುವ ರೂಪಶ್ರೀ ಪ್ರತಿನಿತ್ಯ ಡಯಾಲಿಸಿಸ್ ಗೆ ಒಳಗಾಗುತ್ತಿದ್ದು, ಕೊನೆಯುಸಿರೆಳೆಯುವ ಮುನ್ನ ತನ್ನ ಮಗನನ್ನು ನೋಡುವ ಹÀಂಬಲ ವ್ಯಕ್ತಪಡಿಸುತ್ತಿದ್ದಾಳೆ. ಮನ ನೊಂದ ಈಕೆಯ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Translate »