ಮೈಸೂರು: ಹಿರಿಯ ರಂಗಕರ್ಮಿಗಳಾದ ಬಿ.ಎಂ.ರಾಮಚಂದ್ರ ಹಾಗೂ ಹೆಚ್.ಬಿ.ಯಶೋಧ ಅವರಿಗೆ ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ‘ಸಿಜಿಕೆ ರಂಗ ಪುರಸ್ಕಾರ’ ನೀಡಿ ಗೌರವಿಸಿದರು. ಮೈಸೂರಿನ ಕಲಾಮಂದಿರ ಆವರಣದಲ್ಲಿ ನೆಲೆ ಹಿನ್ನೆಲೆ ವತಿಯಿಂದ ಆಯೋಜಿಸಿದ್ದ ಸಿಜಿಕೆ (ಸಿ.ಜಿ.ಕೃಷ್ಣಸ್ವಾಮಿ) ರಂಗ ಪುರಸ್ಕಾರ ಪ್ರಶಸ್ತಿಯನ್ನು ಬುಧವಾರ ನೀಡಿ ಗೌರವಿಸಿದರು. ನಂತರ ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್(ಜನ್ನಿ) ಮಾತನಾಡಿ, ಕಲೆ ಎಂಬುದು ವಾಸ್ತವ. ರಂಗಭೂಮಿಯನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಕೆಲಸಕ್ಕೆ ಮುಂದಾದರೆ, ಅದಕ್ಕಿಂತ ದೊಡ್ಡ ದುರಂತ…