ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಶ್ರೀಚಾಮುಂಡೇಶ್ವರಿ ಚಿರಬಿಂಬ ಹಾಗೂ ನೂತನ ರಥ ಸಮರ್ಪಣಾ ಮಹೋತ್ಸವ ನಾಳೆ (ಜೂ.22) ಮಧ್ಯಾಹ್ನ 12.45 ರಿಂದ 1.40 ರಲ್ಲಿ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ನಡೆಯಲಿದ್ದು, ಶ್ರೀ ಚಾಮುಂಡೇಶ್ವರಿ ಅಮ್ಮ ನವರ ಬ್ರಹ್ಮರಥೋತ್ಸವವೂ ನಡೆಯಲಿರುವುದರಿಂದ ಗ್ರಾಮ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ದೇವಾಲಯದ ಅವರಣದಲ್ಲಿ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಚಿರಬಿಂಬ, ರಥಬಿಂಬ, ಶುದ್ದಿನೇತ್ರೋ ನ್ಮಿಲನ, ಧೇನು, ಕುಂಬ, ದೀಪಾಗ್ನಿ, ನಿರೀಕ್ಷಣೆ, ಕಲ್ಪೋಕ್ತ, ಸಪ್ತಮಾತೃ ಕಾಕಲಶ ಸ್ಥಾಪನೆ, ವೇದಿಕಾ, ಮಂಟಪಾರ್ಚನೆ, ರಥಬಿಂಬ,…