ಮೈಸೂರು: ಜಲ ದರ್ಶಿನಿ ಬಳಿ ಹುಣಸೂರು ರಸ್ತೆ ತಿರುವು ನೇರಗೊಳಿಸಲು ಮಂಜೂರಾದ ಕೇಂದ್ರ ರಸ್ತೆ ಅನುದಾನದಲ್ಲೇ ಮೆಟ್ರೊಪೋಲ್ ಸರ್ಕಲ್‍ನಿಂದ ಹಿನಕಲ್‍ವರೆಗೆ 5.45 ಕಿ.ಮೀ. ಡಾಂಬರೀಕರಣಗೊಳಿಸಿ ಅಭಿವೃದ್ಧಿಗೊಳಿ ಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಪಿ.ಚಂದ್ರಪ್ಪ ತಿಳಿಸಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಜಲದರ್ಶಿನಿ ಅತಿಥಿ ಗೃಹದಿಂದ ಪಡುವಾರಹಳ್ಳಿಯ ಮೂಳೆ ಆಸ್ಪತ್ರೆ ಕ್ರಾಸ್‍ವರೆಗೆ ಹುಣಸೂರು ರಸ್ತೆಯ ಅಪ ಘಾತ ತಿರುವನ್ನು ನೇರಗೊಳಿಸಲೆಂದು ಸೆಂಟ್ರಲ್ ರೋಡ್ ಫಂಡ್ ಅಡಿ 2016ರ ನವೆಂಬರ್ 2ರಂದು 12…