ಮಡಿಕೇರಿ: ಮುಂಬೈನಲ್ಲಿರುವ ಮಡಿಕೇರಿ ಮೂಲದ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಶಾಖೆಯನ್ನು ನಗರದಲ್ಲಿ ಉದ್ಘಾಟಿಸಲಾಗಿದ್ದು, ಬಡ ವಿದ್ಯಾರ್ಥಿ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು. ನಗರದ ಶೇಖರ್ ಕಾಂಪ್ಲೆಕ್ಸ್‍ನಲ್ಲಿ ಪ್ರಾರಂಭಗೊಂಡ ಚಂದ್ರಶೇಖರ ರಾವ್ ಮೆಮೊರಿಯಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ, ವಿಧವಾ ವೇತನ, ವೈದ್ಯ ಕೀಯ ನೆರವು, ವಿವಾಹ ಕಾರ್ಯ ಸೇರಿದಂತೆ ಹಲವರಿಗೆ ಆರ್ಥಿಕ ನೆರವು ವಿತರಿಸಲಾಯಿತು. ಅಂತೆಯೇ ಜ್ಞಾನದೀಪ ದೈವಜ್ಞ ಮಹಿಳಾ ಸಂಘಕ್ಕೆ 5 ಸಾವಿರ ರು.ಗಳ ನೆರವು ಹಾಗೂ ದೈವಜ್ಞ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು…