ಮಡಿಕೇರಿಯಲ್ಲಿ ಚಂದ್ರಶೇಖರ್ ರಾವ್ ಸ್ಮಾರಕ ಟ್ರಸ್ಟ್ ಪ್ರಾರಂಭ
ಕೊಡಗು

ಮಡಿಕೇರಿಯಲ್ಲಿ ಚಂದ್ರಶೇಖರ್ ರಾವ್ ಸ್ಮಾರಕ ಟ್ರಸ್ಟ್ ಪ್ರಾರಂಭ

May 30, 2018

ಮಡಿಕೇರಿ: ಮುಂಬೈನಲ್ಲಿರುವ ಮಡಿಕೇರಿ ಮೂಲದ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಶಾಖೆಯನ್ನು ನಗರದಲ್ಲಿ ಉದ್ಘಾಟಿಸಲಾಗಿದ್ದು, ಬಡ ವಿದ್ಯಾರ್ಥಿ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.

ನಗರದ ಶೇಖರ್ ಕಾಂಪ್ಲೆಕ್ಸ್‍ನಲ್ಲಿ ಪ್ರಾರಂಭಗೊಂಡ ಚಂದ್ರಶೇಖರ ರಾವ್ ಮೆಮೊರಿಯಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ, ವಿಧವಾ ವೇತನ, ವೈದ್ಯ ಕೀಯ ನೆರವು, ವಿವಾಹ ಕಾರ್ಯ ಸೇರಿದಂತೆ ಹಲವರಿಗೆ ಆರ್ಥಿಕ ನೆರವು ವಿತರಿಸಲಾಯಿತು. ಅಂತೆಯೇ ಜ್ಞಾನದೀಪ ದೈವಜ್ಞ ಮಹಿಳಾ ಸಂಘಕ್ಕೆ 5 ಸಾವಿರ ರು.ಗಳ ನೆರವು ಹಾಗೂ ದೈವಜ್ಞ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಟ್ರಸ್ಟ್ ವತಿಯಿಂದ ನೀಡಲಾಯಿತು.

ನಗರದ ಶೇಖರ್ ಜ್ಯುವೆಲ್ಲರಿ ಮಾಲೀಕ ಎಸ್.ಎಂ.ಈಶ್ವರ್ ಕುಮಾರ್ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷೆ ಶ್ರೀದೇವಿ ಸಿ.ರಾವ್ ಮಾತನಾಡಿ, ಸಮಾಜ ಸೇವೆಯನ್ನೇ ಜೀವನದ ದ್ಯೇಯೋದ್ದೇಶವಾಗಿರಿಸಿಕೊಂಡಿದ್ದ ಚಂದ್ರಶೇಖರ್ ರಾವ್ ನೆನಪಿನಲ್ಲಿ ಪ್ರಾರಂಭವಾಗಿರುವ ಈ ಟ್ರಸ್ಟ್ ಮುಂಬೈನಲ್ಲಿ ಮೊದಲು ಪ್ರಾರಂಭವಾಗಿದ್ದು ಇದೀಗ ಚಂದ್ರಶೇಖರ ರಾವ್ ಹುಟ್ಟೂರಾದ ಮಡಿಕೇರಿಯಲ್ಲಿಯೂ ಟ್ರಸ್ಟ್‍ನ ಶಾಖೆ ಪ್ರಾರಂಭಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ.ಎಸ್.ಮೋಹನ್, ಶುಭಾ ವಿಶ್ವನಾಥ್, ಸಂಸ್ಥೆಯ ಉಪಾಧ್ಯಕ್ಷ ಎಂ.ಎನ್.ಪ್ರತಾಪ್, ಕಾರ್ಯದರ್ಶಿ ಎಂ.ಎನ್.ಸಚಿನ್, ಖಚಾಂಜಿ ಎಂ.ಎ.ಅಂಜನ್ ಕುಮಾರ್, ಅನಿತಾ ಪ್ರತಾಪ್ ಶೇಟ್, ವಸುಧಾ, ದೈವಜ್ಞ ಸಮಾಜದ ಸದಸ್ಯರು ಪಾಲ್ಗೊಂಡಿದ್ದರು. ಅಖಿಲಾ ಎಂ.ಎ. ಕಾರ್ಯಕ್ರಮ ನಿರೂಪಿಸಿದರು.

Translate »