ಮದ್ದೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ರೈತರ ಹಾಗೂ ಜನಸಾಮಾನ್ಯರ ಕೆಲಸಗಳು ಸಮ ರ್ಪಕವಾಗಿ ಆಗುತ್ತಿಲ್ಲವೆಂದು ಆರೋಪಿಸಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.ತಾಲೂಕು ಕಚೇರಿ ಎದುರು ಜಮಾ ಯಿಸಿದ ರೈತರು, ಇಲ್ಲಿನ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಪುಟ್ಟಸ್ವಾಮಿ ಮಾತ ನಾಡಿ, ತಾಲೂಕು ಕಚೇರಿಯಲ್ಲಿ ಖಾತೆ ಬದಲಾವಣೆ, ಆರ್‍ಟಿಸಿ, ಪಡಿತರ ಚೀಟಿ ವಿತರಣೆ, ಒತ್ತುವರಿ ತೆರವು ಸೇರಿದಂತೆ ಇನ್ನಿತರ ಕೆಲಸಗಳು ತ್ವರಿತವಾಗಿ ನಡೆ ಯುತ್ತಿಲ್ಲ. ಇದರಿಂದ ನಿತ್ಯ ರೈತರು ಹಾಗೂ ಸಾರ್ವಜನಿಕರು ತಮ್ಮ ಕೆಲಸ ಬಿಟ್ಟು ತಾಲೂಕು ಕಚೇರಿಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಇಲ್ಲಿನ ಅಧಿಕಾರಿ ಗಳು ಹಣ ಪಡೆಯದೇ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಇನ್ನು ಮುಂದೆ ರೈತರು, ಸಾರ್ವಜನಿಕರ ಕೆಲಸ ಮಾಡಿಕೊಡಲು ಹಣ ಪಡೆದು ಸಿಕ್ಕಿ ಹಾಕಿ ಕೊಂಡರೆ ಅಂತಹ ಅಧಿಕಾರಿಗಳ ಮಾನವನ್ನು ಬಹಿರಂಗವಾಗಿ ಹರಾಜು ಹಾಕಲಾಗು ವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೇ ಪ್ರತಿ ಮಂಗಳವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2ಗಂಟೆವರೆಗೆ ತಾಲೂಕು ಕಚೇರಿಗೆ ರೈತ ಮುಖಂಡರು ಆಗಮಿಸಿ ರೈತರ ಹಾಗೂ ಸಾರ್ವಜನಿಕರ ಕೆಲಸ ಮಾಡಿ ಕೊಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡುವಂತೆ ಒತ್ತಡ ಏರಲಾಗು ವುದು ಎಂದರು. ಇದೇ ವೇಳೆ ಶಿರಸ್ತೇದಾರ್ ಪ್ರಭಾಕರ್‍ಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಉಮೇಶ್, ವೆಂಕಟೇಗೌಡ, ಕೆಂಚಪ್ಪ, ಮಾದೇಗೌಡ, ಪಟೇಲ್ ಶ್ರೀನಿವಾಸ್, ವಿಜಯಕುಮಾರ್ ಇನ್ನಿತರರಿದ್ದರು.