ಸುಹೇಲ್‍ಗೆ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ
ಮಂಡ್ಯ

ಸುಹೇಲ್‍ಗೆ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ

May 30, 2018

ಮಂಡ್ಯ: ಅಮೆರಿಕಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಸಿ.ಎಸ್.ಮೊಹಮ್ಮದ್ ಸುಹೇಲ್ ತಂಡಕ್ಕೆ ಎರಡನೇ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ ದೊರಕಿದೆ ಎಂದು ಸುಹೇಲ್ ತಂದೆ ಅನಾರ್ಕಲಿ ಸಲೀಂ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಮೆರಿಕಾದ ಪಿಟ್ಸ್‍ಬರ್ಗ್‍ನಲ್ಲಿ ಮೇ 13 ರಿಂದ 18ರವರೆಗೆ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಸೆಂಟ್ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿ ಶ್ರೀರಂಗಪಟ್ಟಣದ ಸಿ.ಎಸ್‍ಮೊಹಮ್ಮದ್ ಸುಹೇಲ್ ಮತ್ತು ಪುತ್ತೂರಿನ ವಿವೇಕಾ ನಂದ ಕಾಲೇಜಿನ ಸ್ವಸ್ತಿಕ್ ಪದ್ಮ ತಂಡಕ್ಕೆ ಅಂತಾರಾಷ್ಟ್ರೀಯ ಮಟ್ಟದ ಎರಡನೇ ಗ್ರ್ಯಾಂಡ್ ಅವಾರ್ಡ್ ದೊರಕಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಪದಕ ಹಾಗೂ ತಲಾ 55 ಸಾವಿರ ರೂ. ಬಹುಮಾನ ವನ್ನು ಒಳಗೊಂಡಿದೆ ಎಂದು ತಿಳಿಸಿದರು.

ಮಧ್ಯಪ್ರದೇಶ, ಬಾರಾಮತಿ, ತಮಿಳು ನಾಡು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಸಮಾವೇಶಗಳಲ್ಲಿ ಸುಹೇಲ್ ವೈಜ್ಞಾನಿಕ ಪ್ರಬಂಧ ಮಂಡಿಸಿ ದ್ದಾರೆ. ಅಲ್ಲದೆ, ಚಂದನ ದೂರದರ್ಶನದ ರಾಜ್ಯಮಟ್ಟದ ಥಟ್ ಅಂತ ಹೇಳಿ ವಿಜ್ಞಾನ ಕ್ವಿಜ್‍ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿ ದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಕೈಲಾಶ್ ಸತ್ಯಾರ್ಥಿ ಅವರಿಂದ ಪ್ರಶಂಸೆ ಪಡೆದಿರುವ ಸುಹೇಲ್ ತಂಡಕ್ಕೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್ ಅಭಿನಂದಿಸಿದ್ದಾರೆ.

Translate »