ಗೋಣಿ ಕೊಪ್ಪಲು: ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರನ್ನು ಕೊಡಗು ಜಿಲ್ಲಾ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ಮಾಡಿದರು. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಮೊದಲ ಬಾರಿಗೆ ಬೆಂಗ ಳೂರಿನ ಪದ್ಮನಾಭ ನಗರದ ದೇವೇ ಗೌಡರ ನಿವಾಸಕ್ಕೆ ತೆರಳಿದ ಸಂಕೇತ್ ಪೂವಯ್ಯ ದೇವೇಗೌಡರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಸಂದರ್ಭ ಜಿಲ್ಲೆಯಲ್ಲಿ ಜೆಡಿಎಸ್‍ನ ರಾಜಕೀಯ ಚಟು ವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕೊಡಗಿನಲ್ಲಿ ಮಿತಿಮೀರಿದ ಆನೆ-ಮಾನವ ಸಂಘರ್ಷ ಕಾಡಾನೆಗಳ ಹಾವಳಿಯಿಂದ ಆಗುತ್ತಿರುವ ಪ್ರಾಣ ಹಾನಿ, ಬೆಳೆ ಹಾನಿ, ಕೃಷಿ ಚಟುವಟಿಕೆಗೆ ಹಿನ್ನಡೆ ಬಗ್ಗೆ ಪ್ರಸ್ತಾಪಿ ಸಿದರು. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ನಿಷ್ಕ್ರೀಯತೆಯಿಂದಾಗಿ 49 ಅಮೂಲ್ಯ ಜೀವಗಳು ಬಲಿಯಾ ಗಿವೆ. 150ಕ್ಕೂ ಅಧಿಕ ಮಂದಿ ಶಾಶ್ವತ ಅಂಗವೈಪಲ್ಯ ಹೊಂದಿದ್ದಾರೆ. ತನ್ನ ಜೀವ ನದಾರಕ್ಕೆ ಹಸುವನ್ನು ನಂಬಿ ಕೊಂಡಿದ್ದ ರೈತ ದಯನೀಯ ಸ್ಥಿತಿಗೆ ತಲುಪಿದ್ದಾನೆ. ರೈತರು, ಕಾರ್ಮಿಕರು ಕಾಫಿ ತೋಟಕ್ಕೆ ತೆರ ಳುವುದು ದುಸ್ತರವಾಗಿದೆ. ಅರಣ್ಯ ಇಲಾಖೆಯ ಕೆಲವು ಹಿರಿಯ ಅಧಿಕಾರಿ ಗಳು ತಮಗೆ ಇಷ್ಟ ಬಂದಂತೆ ವರ್ತಿಸುತ್ತಿ ದ್ದಾರೆ ಎಂಬ ವಿಷಯವನ್ನು ದೇವೆಗೌಡ ರಿಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲೆಯ ಅರಣ್ಯ ಆಧಿಕಾರಿಗಳು ಕಾಡಾನೆ ಯಿಂದ ದಾಳಿಗೊಳಗಾದ ಕಾರ್ಮಿಕನ ಸಮಸ್ಯೆಗೆ ಸ್ಪಂಧಿಸುವಲ್ಲಿ ವಿಫಲರಾಗಿ ದ್ದಾರೆ. ನೆಪ ಮಾತ್ರಕಷ್ಟೇ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಕಾರ್ಮಿಕರ, ರೈತರ ಮೇಲೆ ಮಾನವೀಯತೆ ತೋರಬೇಕಾದ ಇವರು ಕೇವಲ ಕಾನೂನನ್ನೇ ಮುಂದಿ ಟ್ಟುಕೊಂಡು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಹಾನಿಗೊಳ ಗಾದವರಿಗೆ ಸಕಾಲದಲ್ಲಿ ಪರಿಹಾರ ವಿತರಿಸುವಲ್ಲಿ ವಿಳಂಬದೋರಣೆಯ ಬಗ್ಗೆ ಗಮನ ಸೆಳೆದ ಸಂಕೇತ್ ಪೂವಯ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆನೆ ದಾಳಿ ಯಿಂದ ಅಂಗವೈಪಲ್ಯತೆಯನ್ನು ಕಂಡಿರುವ ಅನೇಕ ಮಂದಿಗೆ ಇನ್ನು ಕೂಡ ಸೂಕ್ತ ಪರಿಹಾರ ನೀಡದಿರುವ ಬಗ್ಗೆ ವಿವರಿಸಿ ದರು. ಜಿಲ್ಲೆಯಲ್ಲಿರುವ ಕಾಫಿಬೆಳೆಗಾರರ, ಶ್ರಮಿಕರ, ಕಾರ್ಮಿಕರು ಅನುಭವಿಸುತ್ತಿ ರುವ ಸಮಸ್ಯೆ ವಿವರಗಳನ್ನು ಈ ಸಂದರ್ಭ ದೇವೆಗೌಡರಿಗೆ ಮನವರಿಕೆ ಮಾಡಿಕೊಟ್ಟರು.