ಚನ್ನರಾಯಪಟ್ಟಣ: ಚುನಾವಣಾ ಸಮಯದಲ್ಲಿ ಸಚಿವ ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಹಿನ್ನೆಲೆ ತಮ್ಮ ಪ್ರಭಾವ ಬಳಸಿ ಪಟ್ಟಣದ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂದು ಜಿಪಂ ಸದಸ್ಯ ಶ್ರೇಯಸ್ ಎಂ.ಪಾಟೀಲ್ ಆರೋಪಿಸಿದ್ದಾರೆ. ಪಟ್ಟಣದ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್‍ರನ್ನು ನಿನ್ನೆ ಒಒಡಿ ಮೂಲಕ ಎತ್ತಂಗಡಿ ಮಾಡಿ, ಕೋಲಾರದ ಜಿಲ್ಲಾ ಸ್ಪೆಷಲ್ ಬ್ರಾಂಚ್‍ಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೇಯಸ್ ಎಂ.ಪಾಟೀಲ್, ಚುನಾವಣಾ ಸಮಯದಲ್ಲಿ ರೇವಣ್ಣ…