ಭೇರ್ಯ: ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಆ.11ರಂದು ಚಾಲನೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಕೆ.ಆರ್.ನಗರ ತಾಲೂಕು ಮಿರ್ಲೆ ಗ್ರಾಮ ದಲ್ಲಿ ಶನಿವಾರ ಬಸ್ ಶೆಲ್ಟರ್, ಗ್ರಾ.ಪಂ ವಾಣಿಜ್ಯ ಸಂಕೀರ್ಣ, ಅಂಗನವಾಡಿ ಕೇಂದ್ರ ಮತ್ತು ಅಶೋಕ ಸ್ಥಂಭ ಉದ್ಘಾಟಿಸಿ ಮಾತ ನಾಡಿದರು. ಮೂರು ದಿನಗಳ ಕಾಲ ನಡೆಯಲಿ ರುವ ಜಲಪಾತೋತ್ಸವವನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಉದ್ಘಾಟಿಸಲಿದ್ದು, ನಾಡಿನ ನಾನಾ ಹೆಸರಾಂತ ಕಲಾವಿದರಿಂದ ರಸ ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಈ ಬಾರಿ…