ಮೈಸೂರು,ಫೆ.21(ಎಂಟಿವೈ)- ಮೈಸೂರಿನ ರಸ್ತೆ ಬದಿ ಇರುವ ಗಿಡ-ಮರಗಳಿಗೆ ಅನಧಿಕೃತವಾಗಿ ಜಾಹೀರಾತು ಫಲಕ ಅಳವಡಿ ಸಿರುವುದನ್ನು ಭಾನುವಾರ ಕ್ಲೀನ್ ಮೈಸೂರು ಫೌಂಡೇಷನ್ ಕಾರ್ಯಕರ್ತರು ತೆರವು ಗೊಳಿಸುವ ಅಭಿಯಾನ ಆರಂಭಿಸಿದರು. ಮೈಸೂರಿನ ಒಂಟಿಕೊಪ್ಪಲ್‍ನಲ್ಲಿರುವ `ಮೈಸೂರು ಒನ್’ ಕಚೇರಿ ಸಮೀಪದಿಂದ ಸ್ವಚ್ಛ ಸರ್ವೇಕ್ಷಣ್ ಹಿನ್ನೆಲೆಯಲ್ಲಿ ಕ್ಲೀನ್ ಮೈಸೂರು ಫೌಂಡೇಷನ್ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಹಾಗೂ ಗಿಡಮರ ಗಳಿಗೆ ಅಳವಡಿಸಿರುವ ಜಾಹೀರಾತು ಫಲಕಗಳ ತೆರವಿನ ಅಭಿಯಾನದಲ್ಲಿ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ವಿವಿಧ ತಂಡ ಗಳಾಗಿ ವಿಂಗಡಿಸಿ ಒಂಟಿಕೊಪ್ಪಲಿನ ವಿವಿಧ ರಸ್ತೆಗಳಲ್ಲಿ ಸ್ವಚ್ಛತಾ…