ಮರಗಳಿಗೆ ಅಳವಡಿಸಿದ ಅನಧಿಕೃತ ಜಾಹೀರಾತು ತೆರವು
ಮೈಸೂರು

ಮರಗಳಿಗೆ ಅಳವಡಿಸಿದ ಅನಧಿಕೃತ ಜಾಹೀರಾತು ತೆರವು

February 22, 2021

ಮೈಸೂರು,ಫೆ.21(ಎಂಟಿವೈ)- ಮೈಸೂರಿನ ರಸ್ತೆ ಬದಿ ಇರುವ ಗಿಡ-ಮರಗಳಿಗೆ ಅನಧಿಕೃತವಾಗಿ ಜಾಹೀರಾತು ಫಲಕ ಅಳವಡಿ ಸಿರುವುದನ್ನು ಭಾನುವಾರ ಕ್ಲೀನ್ ಮೈಸೂರು ಫೌಂಡೇಷನ್ ಕಾರ್ಯಕರ್ತರು ತೆರವು ಗೊಳಿಸುವ ಅಭಿಯಾನ ಆರಂಭಿಸಿದರು.

ಮೈಸೂರಿನ ಒಂಟಿಕೊಪ್ಪಲ್‍ನಲ್ಲಿರುವ `ಮೈಸೂರು ಒನ್’ ಕಚೇರಿ ಸಮೀಪದಿಂದ ಸ್ವಚ್ಛ ಸರ್ವೇಕ್ಷಣ್ ಹಿನ್ನೆಲೆಯಲ್ಲಿ ಕ್ಲೀನ್ ಮೈಸೂರು ಫೌಂಡೇಷನ್ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಹಾಗೂ ಗಿಡಮರ ಗಳಿಗೆ ಅಳವಡಿಸಿರುವ ಜಾಹೀರಾತು ಫಲಕಗಳ ತೆರವಿನ ಅಭಿಯಾನದಲ್ಲಿ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ವಿವಿಧ ತಂಡ ಗಳಾಗಿ ವಿಂಗಡಿಸಿ ಒಂಟಿಕೊಪ್ಪಲಿನ ವಿವಿಧ ರಸ್ತೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ, ಮರಕ್ಕೆ ಹೊಡೆದಿರುವ ಮೊಳೆ, ಕಬ್ಬಿಣ ತುಂಡು, ತಂತಿ ಸೇರಿದಂತೆ ಇನ್ನಿತರ ಮರದ ಬೆಳ ವಣಿಗೆಗೆ ಮಾರಕವಾಗಿರುವ ಕಬ್ಬಿಣದ ಚೂರನ್ನು ತೆರವುಗೊಳಿಸಿದರು.

ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೂ ನಡೆಸಿದ ಅಭಿಯಾನದಲ್ಲಿ ಹತ್ತಾರು ಬ್ಯಾಗ್ ಪ್ಲಾಸ್ಟಿಕ್ ನಿರುಪಯುಕ್ತ ವಸ್ತುಗಳನ್ನು ಸಂಗ್ರ ಹಿಸಿದರು. ಅಲ್ಲದೆ 50ಕ್ಕೂ ಹೆಚ್ಚು ಮರ ಗಳಿಂದ ಜಾಹೀರಾತು ಫಲಕ ತೆರವು ಗೊಳಿಸಿ, ಅದಕ್ಕಾಗಿ ಮರಕ್ಕೆ ಹೊಡೆಯ ಲಾಗಿದ್ದ ಮೊಳೆಯನ್ನು ಹೊರ ತೆಗೆದರು.

ಇದಕ್ಕೂ ಮುನ್ನ ಇ-ತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಜನರು ಮುಂದಾಗುವಂತೆ ಜಾಗೃತಿ ಮೂಡಿಸಲಾಯಿತು. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯ ಪುನರ್ ಬಳಕೆ ಮಾಡಿ ತಯಾರಿಸಿರುವ ಪೀಠೋಪಕರಣವನ್ನು ಪ್ರದ ರ್ಶನಕ್ಕಿಟ್ಟು, ಹಸಿಕಸ, ಒಣಕಸ, ಪ್ಲಾಸ್ಟಿಕ್ ವಸ್ತು, ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತು ಗಳನ್ನು ಬೇರ್ಪಡಿಸಿ ವೈಜ್ಞಾನಿಕ ವಿಲೇವಾರಿಗೆ ಸಹಕರಿಸುವಂತೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ಕ್ಲೀನ್ ಮೈಸೂರು ಫೌಂಡೇಷನ್ ನಿರ್ದೇಶಕರಾದ ಲೀಲಾ ಶಿವಕುಮಾರ್, ಮಧುಕೇಶ್, ಲೀಲಾ ವೆಂಕ ಟೇಶ್, ಸುರಕ್ಷಾ ಫೌಂಡೇಷನ್‍ನ ಆನಂದ್ ರಾಜ್, ಹಸಿರು ದಳದ ಅನಿಲ್ ಮತ್ತು ಅಶೋಕ್, ದರ್ಶನ್, ಸುಮಂತ್, ಆಯು ಷ್ಮಾನ್, ಪವನ್, ನಿತೇಶ್, ಧನುಷ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »