ಮೈಸೂರು

ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ

February 22, 2021

ಮೈಸೂರು,ಫೆ.21(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನುವಾರ ವಿವಿಧ ಸಂಸ್ಥೆಗಳ ಕಾರ್ಯ ಕರ್ತರು, ಸ್ವಯಂಸೇವಕರು ಸ್ವಚ್ಛತಾ ಅಭಿಯಾನ ನಡೆಸಿ 10 ಚೀಲಕ್ಕೂ ಹೆಚ್ಚು ಪ್ಲಾಸ್ಟಿಕ್ ಸೇರಿದಂತೆ ನಿರುಪಯುಕ್ತ ಕಸ ಸಂಗ್ರಹಿಸಿದರು. ರೋಟರಿ ಮೈಸೂರ್ ಸೌತ್ ಈಸ್ಟ್, ಇನ್ನರ್‍ವೀಲ್ ಕ್ಲಬ್ ಆಫ್ ಸೌತ್ ಈಸ್ಟ್, ರೋಟರಾಕ್ಟ್ ಕ್ಲಬ್ ಮತ್ತು ರೋಟರಾಕ್ಟ್ ವಿಶ್ವಪ್ರಜ್ಞ, ಎಂ.ಐ.ಟಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ 7.30ರಿಂದ 9.30ರವರೆಗೆ ನಡೆದ ಸ್ವಚ್ಛತಾ ಅಭಿಯಾನÀ ದಲ್ಲಿ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಕುಕ್ಕರಹಳ್ಳಿ ಕೆರೆಯ ವಾಕಿಂಗ್ ಪಾಥ್, ಕೆರೆ ಹೊರ ಭಾಗದ ಸುತ್ತಲೂ ಪರಿಸರ ಮಾರಕ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ಸಂಗ್ರಹಿಸಿದರು. ಸುಮಾರು 10 ಚೀಲಕ್ಕೂ ಹೆಚ್ಚು ತ್ಯಾಜ್ಯ ಸಂಗ್ರಹಿಸಿ ಪಾಲಿಕೆ ಸಿಬ್ಬಂದಿಗೆ ಒಪ್ಪಿಸಿದರು.

ಇದೇ ವೇಳೆ ಇನ್ನರ್‍ವೀಲ್ ಸೌತ್ ಈಸ್ಟ್ ಅಧ್ಯಕ್ಷೆ ಶುಭಾ ಮುರಳೀಧರ ಮಾತನಾಡಿ, ಕುಕ್ಕರಹಳ್ಳಿ ಕೆರೆ ಸುತ್ತಮುತ್ತಲಿನ ರಸ್ತೆಯಲ್ಲಿ ದಾರಿಹೋಕರು ನಿರುಪ ಯೋಗಿ ವಸ್ತುಗಳನ್ನು ಎಸೆದು ಹೋಗುತ್ತಾರೆ. ಇದರಿಂದ ಕೆರೆ ಪರಿಸರ ಮಾತ್ರವಲ್ಲದೆ, ಸುತ್ತಮುತ್ತಲಿನ ವಾತಾವರಣ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಸ್ವಚ್ಛತಾ ಅಭಿ ಯಾನ ನಡೆಸಲಾಗಿದೆ. ಸ್ಥಳೀಯರು ಎಲೆಕ್ಟ್ರಾನಿಕ್ ನಿರುಪ ಯುಕ್ತ ತ್ಯಾಜ್ಯ, ಬಳಸಿದ ಸಿರಂಜ್, ಸೂಜಿಗಳನ್ನು ಎಲ್ಲೆಂದ ರಲ್ಲಿ ಎಸೆಯದೇ ಮೈಸೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ನೀಡಿದರೆ ಸ್ವಚ್ಛತೆಯನ್ನು ಕಾಪಾಡ ಬಹುದು ಎಂದರು. ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಸಿ.ವೇದಾವತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »