ಕುಕ್ಕರಹಳ್ಳಿ, ಹೆಬ್ಬಾಳು ಕೆರೆಗಳಲ್ಲಿ ಶಾಸಕ ನಾಗೇಂದ್ರ ಪರಿಶೀಲನೆ
ಮೈಸೂರು

ಕುಕ್ಕರಹಳ್ಳಿ, ಹೆಬ್ಬಾಳು ಕೆರೆಗಳಲ್ಲಿ ಶಾಸಕ ನಾಗೇಂದ್ರ ಪರಿಶೀಲನೆ

March 13, 2020

ಮೈಸೂರು, ಮಾ.12(ಆರ್‍ಕೆ)-ಇತ್ತೀ ಚೆಗೆ ಕೆಲವೆಡೆ ಕೊಕ್ಕರೆ ಸೇರಿದಂತೆ ಇನ್ನಿ ತರೆ ಪಕ್ಷಿಗಳು ಹಾಗೂ ಕೋಳಿಗಳು ಏಕಾ ಏಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ ಅವರು ಅಧಿಕಾರಿಗಳೊಂ ದಿಗೆ ಮೈಸೂರಿನ ಕುಕ್ಕರಹಳ್ಳಿ, ಹೆಬ್ಬಾಳು ಕೆರೆ ಹಾಗೂ ಮೇಟಗಳ್ಳಿಯ ಬಿಎಂಶ್ರೀ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ 6 ತಿಂಗಳಿಂದೀಚೆಗೆ ಯಾವ ಯಾವ ಬಗೆಯ ಎಷ್ಟು ಪಕ್ಷಿಗಳು ಅಸಹಜ ವಾಗಿ ಸಾವನ್ನಪ್ಪಿವೆ, ಲ್ಯಾಬೊರೇಟರಿ ವರದಿ ಗಳು ಏನು ಹೇಳಿವೆ, ಕಳೆದ ಮೂರು ದಿನಗಳ ಹಿಂದೆ ಕುಕ್ಕರಹಳ್ಳಿ ಮತ್ತು ಹೆಬ್ಬಾಳು ಕೆರೆಗಳಲ್ಲಿ ಸಾವನ್ನಪ್ಪಿದ ಪಕ್ಷಿಗಳ ಸ್ಯಾಂಪಲ್ ವರದಿ ಹಾಗೂ ಬಿಎಂಶ್ರೀ ನಗರದಲ್ಲಿ ಕೋಳಿ ಗಳ ಸಾವಿಗೆ ಕಾರಣಗಳೇನು ಎಂಬುದರ ಬಗ್ಗೆ ಶಾಸಕರು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಅಜಿತ್ ಕುಮಾರ್ ಅವರಿಂದ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ನಾಗೇಂದ್ರ ಅವರು, ಕುಕ್ಕರಹಳ್ಳಿ ಮತ್ತು ಹೆಬ್ಬಾಳು ಕೆರೆಯಲ್ಲಿ ಸಾವನ್ನಪ್ಪಿದ ಪಕ್ಷಿಗಳು ಹಾಗೂ ಬಿಎಂಶ್ರೀ ನಗರದ ರಾಮು ಎಂಬುವವರ ಕೋಳಿ ಫಾರಂನಲ್ಲಿ ಕೋಳಿ ಗಳ ಸಾವಿನ ಬಗ್ಗೆ ಪ್ರಯೋಗಾಲಯ ದಿಂದ ಬಂದಿರುವ ವರದಿಯಲ್ಲಿ ನೆಗೆಟಿವ್ ಬಂದಿರುವುದರಿಂದ ಹಕ್ಕಿ ಜ್ವರ ಇಲ್ಲ ಎಂಬುದು ಖಚಿತಪಟ್ಟಿದೆ. ಇದರ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.

ಇನ್ನು ಕರ್ನಾಟಕದಲ್ಲಿ ಕೊರೊನಾ ವೈರಸ್ ಅಷ್ಟೇನೂ ಪ್ರಬಲವಾಗಿಲ್ಲ. ಇಲ್ಲಿನ ಉಷ್ಣಾಂ ಶಕ್ಕೆ ವೈರಸ್‍ಗಳು ನಾಶವಾಗುತ್ತವೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಯಾರೂ ಭಯಭೀತರಾಗಬೇಕಾಗಿಲ್ಲ ಎಂದ ಅವರು, ಹಕ್ಕಿ ಜ್ವರ ಮತ್ತು ಕೋವಿಡ್-19 ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಜತೆಗೆ ಜನರಿಗೆ ಆ ಬಗ್ಗೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಮೈಸೂರು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಅಜಿತ್‍ಕುಮಾರ, ಸಹಾಯಕ ನಿರ್ದೇ ಶಕ ಡಾ.ಎಸ್.ಸಿ.ಸುರೇಶ, ನಗರಪಾಲಿಕೆ ವಲಯ ಕಚೇರಿ-4ರ ವಲಯಾಧಿಕಾರಿ ಪ್ರಿಯದರ್ಶಿನಿ, ಅಭಿವೃದ್ಧಿ ಅಧಿಕಾರಿ ಸುನೀಲ್, ಅರಣ್ಯ ಇಲಾಖೆ ಅಧಿಕಾರಿ ಗಳು ಈ ಸಂದರ್ಭ ಉಪಸ್ಥಿತರಿದ್ದರು.

Translate »