ನಾಳೆ ಬೆಂಗಳೂರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ಸಮಾವೇಶ
ಮೈಸೂರು

ನಾಳೆ ಬೆಂಗಳೂರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ಸಮಾವೇಶ

February 22, 2021

ಮೈಸೂರು,ಫೆ.21(ಎಂಟಿವೈ)-ಖಾಸಗಿ ಶಾಲಾ ಅಭಿ ವೃದ್ಧಿ ಶುಲ್ಕ ಪಾವತಿಯಲ್ಲಿ ಶೇ.30ರಷ್ಟು ಕಡಿತಗೊಳಿಸಲು ಸೂಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಫೆ.23 ರಂದು ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿಗಳ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ `ಸಿಸ್ಪ್ಮಾಮ್’ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾರಕವಾದ ಹೆಜ್ಜೆ ಇಡುತ್ತಿದೆ. ಅವೈಜ್ಞಾನಿಕವಾಗಿ ಕೆಲವು ಆದೇಶ ಹೊರಡಿಸಿದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಅಭಿವೃದ್ಧಿ ಶುಲ್ಕವನ್ನು ಶೇ.30ರಷ್ಟು ಕಡಿತಗೊಳಿಸಿದೆ. ಶುಲ್ಕ ಪಾವತಿಗೆ ಸಂಬಂಧಿಸಿ ಶಿಕ್ಷಣ ಸಂಸ್ಥೆ ಗಳು-ಪೋಷಕರ ನಡುವೆ ಕಂದಕ ಸೃಷ್ಟಿಸು ತ್ತಿದೆ. ಹಾಗಾಗಿ, ಸರ್ಕಾರ ಆದೇಶ ಹಿಂಪಡೆದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಹಿತಕಾಯ ಬೇಕೆಂದು ಆಗ್ರಹಿಸಿ ಫೆ.23ರ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಮಾವೇಶ ನಡೆಸುತ್ತಿರುವುದಾಗಿ ತಿಳಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಫೆ.23ರಂದು ರಾಜ್ಯದ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆ ಆನ್‍ಲೈನ್ ಅಥವಾ ಆಫ್‍ಲೈನ್ ತರಗತಿ ನಡೆಸುವುದಿಲ್ಲ. ಎಲ್ಲ ಶಿಕ್ಷಣ ಸಂಸ್ಥೆ ಗಳ ಆಡಳಿತ ಮಂಡಳಿಯವರು, ಶಿಕ್ಷಕರು ಹಾಗೂ ಇನ್ನಿತರ ಸಿಬ್ಬಂದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿ ದ್ದಾರೆ ಎಂದÀರು. ಶಾಲೆಗಳು ಪದೇ ಪದೆ ಪರವಾನಗಿ ನವೀಕರಣ ಮಾಡಬೇಕಿದೆ. ನೋಂದಣಿಗೆ ಸಂಬಂಧಿಸಿ ಅಗ್ನಿಶಾಮಕ ಕಚೇರಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದನ್ನು ಕಡ್ಡಾಯ ಗೊಳಿಸಲಾಗಿದೆ. ಈ ನಿಯಮ ಹೊಸ ಕಟ್ಟಡ ಗಳಿಗೆ ಹೊಂದಿಕೊಂಡರೆ, ತೀರಾ ಹಳೆಯ ದಾದ ಕಟ್ಟಡಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಅಗ್ನಿಶಾಮಕ ಉಪಕರಣ ಅಳವಡಿಕೆಗಷ್ಟೇ ಗಮನ ನೀಡಬೇಕೆಂದು ಆಗ್ರಹಿಸಿದರು.

ಪರಿಹಾರ ನೀಡಿಲ್ಲ: ಕೋವಿಡ್ ಸಂಕಷ್ಟ ಕಾರಣ ಸರ್ಕಾರ ಬಹಳಷ್ಟು ಕ್ಷೇತ್ರಗಳಿಗೆ ಪರಿಹಾರ ನೀಡಿ ದ್ದರೂ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ಇದರಿಂದಾಗಿ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟದ ಕೆಲಸವಾಗಿದೆ. ವಿದ್ಯುತ್ ಶುಲ್ಕ, ಕಟ್ಟಡದ ತೆರಿಗೆ, ನೀರಿನ ಶುಲ್ಕ ಹಾಗೂ ಶಾಲಾ ವಾಹನ ವಿಮೆಗೆ ವಿನಾಯಿತಿ ನೀಡಬೇಕು. ಸೋಮ ವಾರದಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭವಾಗುತ್ತಿವೆ. ಇದೇ ವೇಳೆ ಕೊರೊನಾ ಸಮಸ್ಯೆ ಈಗ ಮತ್ತೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕ ರನ್ನೂ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೂ ಕೊರೊನಾ ಲಸಿಕೆ ಹಾಕಬೇಕೆಂದು ಮನವಿ ಮಾಡಿದರು. `ಸಿಸ್ಪ್ಮಾಮ್’ ಪದಾಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ವೆಂಕಟೇಶ್, ಫಾದರ್ ಸೆಬಾಸ್ಟಿಯನ್, ಮಹಮದ್ ಅಮೀನ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »