ಸರ್ಕಾರಿ ತಂತ್ರಜ್ಞಾನ ಸಂಸ್ಥೆಗಳು `ಎಸ್‍ಎಂಇ’ಗೆ ಸ್ಪಂದಿಸುತ್ತಿಲ್ಲ
ಮೈಸೂರು

ಸರ್ಕಾರಿ ತಂತ್ರಜ್ಞಾನ ಸಂಸ್ಥೆಗಳು `ಎಸ್‍ಎಂಇ’ಗೆ ಸ್ಪಂದಿಸುತ್ತಿಲ್ಲ

February 22, 2021

ಮೈಸೂರು,ಫೆ.21(ಪಿಎಂ)-ಸಾರ್ವಜನಿಕ ವಲಯದ ತಂತ್ರ ಜ್ಞಾನ ಹಾಗೂ ತಾಂತ್ರಿಕ ಸಂಸ್ಥೆಗಳ ಪೈಕಿ ಬಹುತೇಕ ಸಂಸ್ಥೆ ಗಳು ಸಣ್ಣ ಉದ್ಯಮಿಗಳಿಗೆ ನಿರೀಕ್ಷೆ ಪ್ರಮಾಣದಲ್ಲಿ ಮಾರ್ಗ ದರ್ಶನ, ಅನುಭವದ ಜ್ಞಾನದ ನೆರವು ನೀಡುತ್ತಿಲ್ಲ ಎಂದು ಎನ್‍ಎಸ್‍ಐಆರ್‍ಸಿಇಎಲ್ ಮಾರ್ಗದರ್ಶಕ, ಐಐಟಿ ಖರಗ್ಪುರ್ ಹಳೆ ವಿದ್ಯಾರ್ಥಿ ಸುಕುಮಾರ್ ರಂಗಾಚಾರಿ ವಿಷಾದಿಸಿದರು.

ಈ ಸಂಸ್ಥೆಗಳು ತಮ್ಮಲ್ಲಿನ ಸಂಶೋಧನೆಗೇ ಆದ್ಯತೆ ನೀಡು ತ್ತಿವೆಯೇ ಹೊರತು `ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳಿಗೆ’ ಅಗತ್ಯ ಮಾರ್ಗದರ್ಶನ ನೀಡುವಲ್ಲಿ ಹಿಂದುಳಿದಿವೆ. ಉದ್ಯಮಿಗಳೊಂದಿಗೆ ಸರಿಯಾದ ಸಂಪರ್ಕ, ಸಮನ್ವಯ ಸಾಧಿಸಿದರೆ ನಿರೀಕ್ಷಿತ ಯಶಸ್ಸು ಕಾಣಬಹುದು ಎಂದರು. ಸಾರ್ವಜನಿಕ ವಲಯದ ತಂತ್ರಜ್ಞಾನ ಸಂಸ್ಥೆಗಳು ಸಂಶೋಧನಾ ಕಾರ್ಯಗಳಲ್ಲಿ ತಲ್ಲಿನ ವಾಗಿರುವ ಕಾರಣಕ್ಕೆ ಉದ್ಯಮಿಗಳನ್ನು ತಲುಪಲಾಗುತ್ತಿಲ್ಲ ಎಂದಾ ದರೂ, ಒಂದು ವಿಭಾಗ ತೆರೆದು ಸ್ಪಂದನೆ ನೀಡಬಹುದು ಎಂದರು.

Translate »