ಮಡಿಕೇರಿ: ಕೊಡವ ಲ್ಯಾಂಡ್ ಬೇಡಿಕೆಯೊಂದಿಗೆ ವಿವಿಧ ಹಕ್ಕುಗಳ ಈಡೇರಿಕೆಗಾಗಿ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.1 ರಂದು 24ನೇ ವರ್ಷದ ‘ದೆಹಲಿ ಚಲೋ’ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಕಾಲ ದಲ್ಲಿ ಕೊಡವರನ್ನು ಹತ್ಯೆಗೈಯಲು ದೇವಟ್ ಪರಂಬ್ ನರ ಮೇಧದಲ್ಲಿ ನೇರಭಾಗಿಯಾದ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆಯ ಪಾಷವೀ ಕೃತ್ಯಕ್ಕಾಗಿ ಫ್ರೆಂಚ್ ಸರ್ಕಾರ ಕೊಡವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಫ್ರೆಂಚ್ ರಾಯಭಾರ ಕಛೇರಿ…