Tag: Corporator KV Sridhar

ಸ್ವಚ್ಛತಾ ಕಾರ್ಯಕ್ಕಿಳಿದ ಕಾರ್ಪೊರೇಟರ್ ಕೆ.ವಿ.ಶ್ರೀಧರ್
ಮೈಸೂರು

ಸ್ವಚ್ಛತಾ ಕಾರ್ಯಕ್ಕಿಳಿದ ಕಾರ್ಪೊರೇಟರ್ ಕೆ.ವಿ.ಶ್ರೀಧರ್

October 5, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದು, ನಗರದಾದ್ಯಂತ ತ್ಯಾಜ್ಯಕ್ಕೆ ಮುಕ್ತಿ ನೀಡುವವರಿಲ್ಲದೆ, ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗುತ್ತಿದೆ. ಈ ನಡುವೆ ಪಾಲಿಕೆ ವಾರ್ಡ್ ನಂ.3ರ ಸದಸ್ಯ ಕೆ.ವಿ.ಶ್ರೀಧರ್ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಗುರುವಾರ ತಾವೇ ಸ್ವಚ್ಛತಾ ಕೆಲಸ ಮಾಡಿದ್ದಾರೆ. ತಮ್ಮ ನವಭಾರತ್ ನಿರ್ಮಾಣ ಸೇವಾ ಟ್ರಸ್ಟ್‍ನ ಕಾರ್ಯಕರ್ತರು, ವಾರ್ಡಿನ ಸಾರ್ವಜನಿಕರು ಹಾಗೂ ಅಂಗಡಿ-ಮುಂಗಟ್ಟುಗಳ ಸಿಬ್ಬಂದಿಯನ್ನು ಜೋಡಿಸಿಕೊಂಡು ರಾಶಿ ಬಿದ್ದಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ. ಜನರು ಕೊಟ್ಟ ಅವಕಾಶಕ್ಕೆ ತಕ್ಕಂತೆ ಸಾರ್ಥಕ…

Translate »