ಸ್ವಚ್ಛತಾ ಕಾರ್ಯಕ್ಕಿಳಿದ ಕಾರ್ಪೊರೇಟರ್ ಕೆ.ವಿ.ಶ್ರೀಧರ್
ಮೈಸೂರು

ಸ್ವಚ್ಛತಾ ಕಾರ್ಯಕ್ಕಿಳಿದ ಕಾರ್ಪೊರೇಟರ್ ಕೆ.ವಿ.ಶ್ರೀಧರ್

October 5, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದು, ನಗರದಾದ್ಯಂತ ತ್ಯಾಜ್ಯಕ್ಕೆ ಮುಕ್ತಿ ನೀಡುವವರಿಲ್ಲದೆ, ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗುತ್ತಿದೆ.

ಈ ನಡುವೆ ಪಾಲಿಕೆ ವಾರ್ಡ್ ನಂ.3ರ ಸದಸ್ಯ ಕೆ.ವಿ.ಶ್ರೀಧರ್ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಗುರುವಾರ ತಾವೇ ಸ್ವಚ್ಛತಾ ಕೆಲಸ ಮಾಡಿದ್ದಾರೆ. ತಮ್ಮ ನವಭಾರತ್ ನಿರ್ಮಾಣ ಸೇವಾ ಟ್ರಸ್ಟ್‍ನ ಕಾರ್ಯಕರ್ತರು, ವಾರ್ಡಿನ ಸಾರ್ವಜನಿಕರು ಹಾಗೂ ಅಂಗಡಿ-ಮುಂಗಟ್ಟುಗಳ ಸಿಬ್ಬಂದಿಯನ್ನು ಜೋಡಿಸಿಕೊಂಡು ರಾಶಿ ಬಿದ್ದಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ.

ಜನರು ಕೊಟ್ಟ ಅವಕಾಶಕ್ಕೆ ತಕ್ಕಂತೆ ಸಾರ್ಥಕ ಸೇವೆ ನೀಡಬೇಕೆಂಬ ಹಂಬಲ ಹೊಂದಿರುವ ಮಹ ದೇಶ್ವರ ಬಡಾವಣೆಯ ವಾರ್ಡ್ ನಂ.3ರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ತಮ್ಮ ನೇತೃತ್ವದಲ್ಲಿ ವಾರ್ಡಿನ ಮೂರು ಸ್ಥಳಗಳಲ್ಲಿ ಬುಧವಾರದಿಂದ ಗುಡ್ಡೆ ಬಿದ್ದಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ.

ಪೌರ ಕಾರ್ಮಿಕರು ಬುಧವಾರದಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿದ ಪರಿಣಾಮ ಇಡೀ ನಗರಕ್ಕೆ ತಟ್ಟಿದೆ. ಅದೇ ರೀತಿ ವಾರ್ಡ್ 3ರಲ್ಲೂ ಮೂರು ಸ್ಥಳಗಳಲ್ಲಿ ತ್ಯಾಜ್ಯದ ಗುಡ್ಡೆ ನಿರ್ಮಾಣವಾಗಿತ್ತು. ದುರ್ವಾಸನೆ ಸೂಸುವ ಮೂಲಕ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ಗಮ ನಿಸಿದ ವಾರ್ಡಿನ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಪಾಲಿಕೆಯ ತ್ಯಾಜ್ಯ ವಿಲೇವಾರಿಯ ಲಾರಿಯನ್ನು ಕರೆಸಿ ಕೊಂಡು ಸ್ವಚ್ಛತಾ ಕೆಲಸ ಮಾಡುವ ಮೂಲಕ ವಾರ್ಡಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೆಬ್ಬಾಳಿನ ಸೂರ್ಯ ಬೇಕರಿ ಎದುರು, ಚಾಮುಂಡೇಶ್ವರಿ ದೇವಸ್ಥಾನದ ಎದುರು ಹಾಗೂ ಅಭಿಷೇಕ್ ವೃತ್ತದ ಸಮೀಪದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು. ಒಂದು ಲಾರಿಯಷ್ಟು ಪ್ರಮಾಣದ ತ್ಯಾಜ್ಯವನ್ನು ವಿದ್ಯಾರಣ್ಯಪುರಂನ ತ್ಯಾಜ್ಯ ವಿಲೇವಾರಿ ಘಟ ಕಕ್ಕೆ ಸಾಗಿಸಲಾಯಿತು.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಕೆ.ವಿ.ಶ್ರೀಧರ್, ಕಸ ವಿಲೇವಾರಿ ಆಗದ ಪರಿಣಾಮ ವಾರ್ಡಿನಲ್ಲಿ ಅನೈರ್ಮಲ್ಯ ತಲೆದೋ ರಿತ್ತು. ದುರ್ವಾಸನೆ ಸೂಸುವಂತಾಗಿತ್ತು. ಜೊತೆಗೆ ಕಸ ಗುಡ್ಡೆ ಹಿಡಿದಿದ್ದ ಸ್ಥಳಗಳಲ್ಲಿ ವಾಹನ ಸಂಚಾ ರಕ್ಕೆ ಮಾತ್ರವಲ್ಲದೆ, ಪಾದಚಾರಿಗಳು ಕಿರಿಕಿರಿ ಅನು ಭವಿಸುವಂತಾಗಿತ್ತು. ಹೀಗಾಗಿ ಸ್ವಚ್ಛತಾ ಕೆಲಸಕ್ಕೆ ತಾವೇ ಕೈ ಹಾಕಬೇಕಾಯಿತು ಎಂದು ತಿಳಿಸಿದರು.

ಕಸ ಹಾಕಲು 3 ಸ್ಥಳ ಗುರುತು: ಜನವಸತಿ ಪ್ರದೇಶವಲ್ಲದ ಮೂರು ಸ್ಥಳಗಳನ್ನು ಗುರುತಿಸಿ ಅಲ್ಲೇ ಕಸವನ್ನು ಹಾಕುವಂತೆ ಆಯಾಯ ಸ್ಥಳಕ್ಕೆ ಸಮೀಪವಿರುವ ಪ್ರದೇಶದವರಿಗೆ ಮಾಹಿತಿ ನೀಡಲಾಗುವುದು. ಇದಕ್ಕಾಗಿ ನಾಳೆ (ಅ.5) ಆಟೋದಲ್ಲಿ ಪ್ರಚಾರ ಮಾಡಿಸಲಾಗುವುದು. ಜೊತೆಗೆ ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಮಾಹಿತಿ ರವಾನಿಸಲಾಗುವುದು. ಈ ರೀತಿಯ ವ್ಯವಸ್ಥೆಯಿಂದ ಕಸ ವಿಲೇವಾರಿ ಸುಲಭವಾಗಲಿದೆ.

ಯುಜಿಡಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ: ಕಟ್ಟಿಕೊಂಡು ತುಂಬಿ ಹರಿಯುತ್ತಿದ್ದ ಒಳಚರಂಡಿಗಳ ಸಂಪರ್ಕವನ್ನು ತಾತ್ಕಾಲಿಕವಾಗಿ ಇಂದು ಮೋರಿಗಳಿಗೆ ನೀಡಲಾಗಿದೆ. ಈ ರೀತಿ ಮಾಡಲು ಅವಕಾಶವಿಲ್ಲ. ಆದರೆ ರಸ್ತೆಯಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಇದನ್ನು ತಡೆ ಗಟ್ಟಲು ವಿಧಿಯಿಲ್ಲದೆ, ಸದ್ಯಕ್ಕಷ್ಟೇ ಈ ರೀತಿ ಮಾಡ ಲಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು, ಪಾದಚಾರಿಗಳು ಕೊಂಚ ನಿಟ್ಟುಸಿರು ಬಿಡುವಂತಾಗಿದೆ ಎಂದು ಕಾರ್ಪೊ ರೇಟರ್ ಶ್ರೀಧರ್ ತಿಳಿಸಿದರು.

Translate »