ಪೌರ ಕಾರ್ಮಿಕರ ಮುಷ್ಕರಕ್ಕೆ ಶಾಸಕ ನಾಗೇಂದ್ರ ಬೆಂಬಲ
ಮೈಸೂರು

ಪೌರ ಕಾರ್ಮಿಕರ ಮುಷ್ಕರಕ್ಕೆ ಶಾಸಕ ನಾಗೇಂದ್ರ ಬೆಂಬಲ

October 5, 2018

ಮೈಸೂರು: ಖಾಯಂ ಮಾತಿಗೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿ ರುವ ಮುಷ್ಕರಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಮಾತನಾಡಿದ ಎಲ್. ನಾಗೇಂದ್ರ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಮರ್ಪಕ ವಾಗಿ ವೇತನ ಸಿಗುತ್ತಿಲ್ಲ. ಇಎಸ್‍ಐ, ಪಿಎಫ್ ಸೇರಿ ದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ಕಾರಣದಿಂದಲೇ ಪೌರಕಾರ್ಮಿಕರಿಗೆ ಚೆಕ್ ಮೂಲಕವೇ ವೇತನ ನೀಡಬೇಕೆಂದು ಬಹಳ ವರ್ಷಗಳಿಂದಲೂ ಒತ್ತಾಯವಿದೆ. ಸಾರ್ವಜನಿ ಕರ ನೆಮ್ಮದಿಗಾಗಿ ದುಡಿಯುತ್ತಿರುವ ಪೌರಕಾರ್ಮಿ ಕರ ಕಷ್ಟ ನನಗೆ ಅರಿವಿದೆ. ಯಾರೂ ಮಾಡದಂ ತಹ ಕೆಲಸವನ್ನು ನಿಷ್ಟೆಯಿಂದ ಮಾಡುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿ ಸಲೇಬೇಕಿದೆ ಎಂದು ಹೇಳಿದರು.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಗುತ್ತಿಗೆದಾರರು ಸರಿಯಾಗಿ ವೇತನ ನೀಡುತ್ತಿಲ್ಲ. ಯಾವುದೇ ಸೌಲಭ್ಯ ನೀಡುತ್ತಿಲ್ಲ. ಆದ್ದ ರಿಂದ ನಗರಪಾಲಿಕೆಯೇ ನೇರ ನೇಮಕಾತಿ ಮಾಡಿ, ವೇತನವನ್ನು ವ್ಯವಸ್ಥಿತವಾಗಿ ನೀಡಬೇಕೆಂಬ ಬೇಡಿಕೆ ನ್ಯಾಯಯುತವಾಗಿದ್ದು, ಇದಕ್ಕೆ ನನ್ನ ಬೆಂಬಲ ವಿದೆ. ಪೌರಕಾರ್ಮಿಕರು ಶ್ರಮಜೀವಿಗಳು. ಮೈಸೂರು ನಗರ ಸ್ವಚ್ಛತೆಯಲ್ಲಿ ಪ್ರಶಸ್ತಿ ದೊರಕುವಲ್ಲಿ ಪೌರ ಕಾರ್ಮಿಕರ ಕೊಡುಗೆಯೇ ಮಹತ್ವದ್ದು. ನೋವಿ ನಲ್ಲಿರುವ ಪೌರಕಾರ್ಮಿಕರ ಹೋರಾಟಕ್ಕೆ ನನ್ನ ಬೆಂಬಲವಿದೆ. ಸೆ.19ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂ ಡಿಲ್ಲ. ಸಭೆಯಲ್ಲಾದರೂ ಪೌರಕಾರ್ಮಿಕರ ಬೇಡಿಕೆ ಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರ ಬೇಕಿತ್ತು ಎಂದು ಅವರು ತಿಳಿಸಿದರು.

700 ಸಾರ್ವಜನಿಕರಿಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ನಿಯೋ ಜಿಸಬೇಕೆಂದು ಸರ್ಕಾರದ ನಿಯಮ ವಿದೆ. ಸಾಂಸ್ಕøತಿಕ ನಗರಿ, ಪ್ರವಾಸಿ ಕೇಂದ್ರವಾಗಿರುವ ಮೈಸೂರಿಗೆ ವರ್ಷ ದಲ್ಲಿ ಸುಮಾರು 40 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಷ್ಟು ಪ್ರಮಾಣದ ಪ್ರವಾಸಿಗರು ಹಾಗೂ ಇಲ್ಲಿನ ನಿವಾಸಿಗಳಿಂದ ಭಾರೀ ಪ್ರಮಾ ಣದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆದ್ದ ರಿಂದ ಅರಮನೆ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಪೌರ ಕಾರ್ಮಿಕರನ್ನು ನಿಯೋಜಿಸಬೇಕು. ಆದರೆ ಪೌರ ಕಾರ್ಮಿಕರ ಕೊರತೆಯಿದ್ದು, ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ನಡೆಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ 400ರಿಂದÀ 500 ಜನರಿಗೆ ಒಬ್ಬರಂತೆ ಪೌರಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕಾ ಗುತ್ತದೆ. ಮೈಸೂರು ನಗರದ ಜನಸಂಖ್ಯೆ ವೇಗ ವಾಗಿ ಬೆಳೆಯುತ್ತಿದೆ.

ಬೆಂಗಳೂರು ಮಾದರಿಯಲ್ಲೇ ಮೈಸೂರು ವೇಗವಾಗಿ ಬೆಳೆಯುತ್ತಿದೆ. ಸ್ವಚ್ಛತೆ ಕಾಪಾಡಿ ಕೊಳ್ಳದಿದ್ದರೆ ಸಮಸ್ಯೆ ದೊಡ್ಡದಾಗುತ್ತದೆ. ಕೂಡಲೇ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳ ಬೇಕು. ಪೌರಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಬಗ್ಗೆ ನಾನೂ, ಸಚಿವರಿಗೆ ತಿಳಿಸಿ, ಪರಿಹಾರಕ್ಕೆ ಒತ್ತಾ ಯಿಸುತ್ತೇನೆಂದು ಕಾರ್ಮಿಕರಿಗೆ ಸ್ಥೈರ್ಯ ತುಂಬಿದ ನಾಗೇಂದ್ರ ಅವರು, ಪ್ರತಿಭಟನೆ ಶಾಂತಯುತವಾಗಿ ರಬೇಕು. ಕಸಗುಡಿಸಿದ ಸ್ಥಳದಲ್ಲಿ ಮತ್ತೇ ಕಸವನ್ನು ಹಾಕುವುದು ಸರಿಯಾದ ಕ್ರಮವಲ್ಲ. ಅದನ್ನು ಮತ್ತೇ ನೀವೇ ತೆಗೆಯ ಬೇಕಾಗುತ್ತದೆ. ನಮ್ಮ ಹೋರಾಟ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಾತ್ರ ಎಂಬುದು ಮನಸ್ಸಿನಲ್ಲಿರಲಿ ಎಂದು ಕಾರ್ಮಿಕರಿಗೆ ಕಿವಿಮಾತು ಹೇಳಿದರು.

Translate »