ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಬಳಿಯ ಶೌಚಾಲಯಕ್ಕೆ ನೀರು, ಯುಜಿಡಿ ಸಂಪರ್ಕಕ್ಕೆ ಶಾಸಕ ನಾಗೇಂದ್ರ ಸಲಹೆ
ಮೈಸೂರು

ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಬಳಿಯ ಶೌಚಾಲಯಕ್ಕೆ ನೀರು, ಯುಜಿಡಿ ಸಂಪರ್ಕಕ್ಕೆ ಶಾಸಕ ನಾಗೇಂದ್ರ ಸಲಹೆ

October 5, 2018

ಮೈಸೂರು: ಲ್ಯಾನ್ಸ್‍ಡೌನ್ ಬಿಲ್ಡಿಂಗ್ ನಲ್ಲಿರುವ ಶೌಚಾಲಯಕ್ಕೆ ಕೂಡಲೇ ನೀರು ಮತ್ತು ಯುಜಿಡಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಶಾಸಕ ಎಲ್.ನಾಗೇಂದ್ರ ಸ್ಥಳದಲ್ಲಿದ್ದ ಅಧಿಕಾರಿ ಗಳಿಗೆ ಸೂಚಿಸಿದರು. ಗುರುವಾರ ಚಾಮ ರಾಜ ಕ್ಷೇತ್ರದ 23ನೇ ವಾರ್ಡ್‍ನಲ್ಲಿ ಪಾದಯಾತ್ರೆ ನಡೆಸಿದ ಎಲ್. ನಾಗೇಂದ್ರ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗೆ ಭೇಟಿ ನೀಡಿದ ವೇಳೆ ಅಚ್ಚರಿ ಕಾದಿತ್ತು. ಮನುಷ್ಯರು ಓಡಾಡಲು ಸಾಧ್ಯವಿಲ್ಲದಷ್ಟು ಮೂತ್ರ ನಿಸರ್ಜನೆಯ ದುರ್ನಾತ. ಶೌಚಾಲಯ ಇದ್ದರೂ ನೀರು -ನಿರ್ವಹಣೆ ಇಲ್ಲ. ವ್ಯಾಪಾರಿಗಳಿಗೆ ನೀಡಿರುವ ತಾತ್ಕಾಲಿಕ ಮಳಿಗೆಯ ಮುಂದೆಯೇ ಕಸ, ಗ್ಲಾಸ್‍ಪೀಸ್‍ಗಳನ್ನು ಬಿಸಾಡಿರು ವುದು. ಫುಟ್‍ಪಾತ್ ಅಕ್ರಮಿಸಿಕೊಂಡಿರುವುದು ಕಂಡು ಬಂದವು.

ಈ ವೇಳೆ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ನಗರದ ಹೃದಯಭಾಗದಲ್ಲಿದ್ದು, ಇದರ ಸುತ್ತ ಹಲವು ಸಮಸ್ಯೆಗಳಿವೆ. ಇದನ್ನು ನೋಡಿ ನನಗೆ ಬೇಸರವಾಗಿದೆ. ದಸರಾ ಸಮೀಪಿಸುತ್ತಿದ್ದು, ಕೂಡಲೇ ಶೌಚಾಲಯಕ್ಕೆ ನೀರು ಮತ್ತು ಯುಜಿಡಿ ವ್ಯವಸ್ಥೆಯನ್ನು ಕಲ್ಪಿಸಬೇಕು. ರಸ್ತೆ ದುರಸ್ತಿಪಡಿಸುವಂತೆ ಅಧಿಕಾರಿ ಗಳಿಗೆ ಸೂಚಿಸಿದರು. ನನ್ನ ಕ್ಷೇತ್ರ ವ್ಯಾಪ್ತಿ ಹಲವು ಪಾರಂಪರಿಕ ಕಟ್ಟಡಗಳು ಇದ್ದು, ಲ್ಯಾನ್ಸ್‍ಡೌನ್ ಬಿಲ್ಟಿಂಗ್, ದೇವರಾಜ ಮಾರುಟ್ಟೆ ಕಟ್ಟಡ ಕಾಮಗಾರಿ ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ನಾನು ಅಧಿಕಾರಕ್ಕೆ ಬಂದ ಮೇಲೆ ಈ ಕುರಿತು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಶಿಥಿಲವಾಗಿದ್ದು, ಸರಿಯಾದ ರೀತಿಯಲ್ಲಿ ಕಾಯಕಲ್ಪ ನೀಡಬೇಕಿದೆ. ಜತೆಗೆ ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವನ್ನು ಹಾಗೇ ಉಳಿಸಿಕೊಳ್ಳಬಹುದಾ? ಅಥವಾ ನೆಲಸಮಗೊಳಿಸಿ ಅದೇ ಮಾದರಿಯಲ್ಲಿ ಹೊಸ ಕಟ್ಟಡ ನಿರ್ಮಿಸ ಬಹುದಾ? ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಈಗಾ ಗಲೇ ಕಟ್ಟಡ ನಿರ್ಮಾಣ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಕೆಡಿಬಿ ಸಭೆಯಲ್ಲೂ ಮಾತನಾಡಿದ್ದೇನೆ ಎಂದು ಹೇಳಿದರು.

Translate »